ಯಮೆನ್‍ನಲ್ಲಿ ಹಸಿವು, ಅಪೌಷ್ಟಿಕತೆಯಿಂದ ಪ್ರತಿದಿನ ಸಾವನ್ನಪ್ಪುತ್ತಿವೆ 130 ಮಕ್ಕಳು..!

ಈ ಸುದ್ದಿಯನ್ನು ಶೇರ್ ಮಾಡಿ

Yaman--02

ಕೈರೋ(ಈಜಿಪ್ಟ್), ನ.18-ಸಮರ ಸಂತ್ರಸ್ತ ಯಮೆನ್‍ನಲ್ಲಿ ಹಸಿವು, ಅಪೌಷ್ಟಿಕತೆ ಮತ್ತು ರೋಗಗಳಿಂದ ಪ್ರತಿದಿನ 130ಕ್ಕೂ ಹೆಚ್ಚು ಮಕ್ಕಳು ಮೃತರಾಗುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ನೆರವು ಸಂಘಟನೆ-ಸೇವ್ ದಿ ಚಿಲ್ಡ್ರನ್ ಹೇಳಿದೆ. ಈ ವರ್ಷದ ಜನವರಿರಿಂದ ಇಲ್ಲಿಯವರೆಗೆ ಯಮೆನ್‍ನಲ್ಲಿ 50,000ಕ್ಕೂ ಅಧಿಕ ಮಕ್ಕಳು ಅಸುನೀಗಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರರ ಅಟ್ಟಹಾಸದಿಂದ ಯಮೆನ್ ನಲುಗುತ್ತಿದೆ. ಎರಡು ವಾರಗಳ ಹಿಂದೆ ಬಂಡುಕೋರರು ರಿಯಾದ್‍ನತ್ತ ಕ್ಷಿಪಣಿ ಉಡಾಯಿಸಿದ ಬಳಿಕ ಆಕ್ರೋಶಗೊಂಡ ಸೌದಿ ಅರೇಬಿಯಾ ಯಮೆನ್‍ನ ಬಂದರುಗಳನ್ನು ಬಂದ್ ಮಾಡಿತ್ತು. ಇದರಿಂದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

Facebook Comments

Sri Raghav

Admin