ಯಲ್ಲಾಪುರದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಇಸ್ರೇಲ್ ಪ್ರಜೆ ದೆಹಲಿಯಲ್ಲಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arrest

ನವದೆಹಲಿ, ಜ.24-ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬೈಕ್ ಸವಾರನ ಸಾವಿಗೆ ಕಾರಣವಾಗಿ ಇಸ್ರೇಲ್ ಗೆ ಪರಾರಿಯಾಗಲು ಯತ್ನಿಸುತ್ತಿದ್ದ ವಿದೇಶಿಗನನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇಸ್ರೇಲ್‍ನ ಓರಿಯಾ ಸ್ಲೋಮೋ (23) ಬಂಧಿತ ಆರೋಪಿ.  ಯಲ್ಲಾಪುರ ಅರೆಬೈಲಿನಲ್ಲಿ ಜ.18ರಂದು ಸ್ಲೋಮೋ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿ ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದ. ಅಪಘಾತದಲ್ಲಿ ಎ. ಕುಣಬಿ ಎಂಬ ಸವಾರ ಮೃತಪಟ್ಟರು. ಈ ಕೃತ್ಯ ಎಸಗಿದ ನಂತರ ಆತ ಅಲ್ಲಿಂದ ಪರಾರಿಯಾಗಿದ್ದ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಬ್‍ಇನ್ಸ್‍ಪೆಕ್ಟರ್ ಶ್ರೀಧರ್ ನೇತೃತ್ವದ ತಂಡವು ಆರೋಪಿಯ ಸುಳಿವನ್ನರಿತು ನಿನ್ನೆ ರಾತ್ರಿ ದೆಹಲಿಯ ಐಜಿಐ ಏರ್‍ಪೋರ್ಟ್‍ನಲ್ಲಿ ಆರೋಪಿಯನ್ನು ಬಂಧಿಸಿತು. ತನ್ನ ಸ್ನೇಹಿತನೊಂದಿಗೆ ದೆಹಲಿ ಮೂಲಕ ಇಸ್ರೇಲ್‍ಗೆ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಈತನನ್ನು ಸೆರೆ ಹಿಡಿಯಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin