ಯಶಸ್ಸಿನ ಸಂತೆಯಲ್ಲಿ ನಿಂತ ‘ಕಬೀರ’

ಈ ಸುದ್ದಿಯನ್ನು ಶೇರ್ ಮಾಡಿ

asdgsgs

ತನ್ನ  ಹಾಡುಗಳು  ಮತ್ತು ಟ್ರೇಲರ್‍ಗಳ ಮೂಲಕ   ಸಾಕಷ್ಟು  ನಿರೀಕ್ಷೆ  ಹುಟ್ಟು ಹಾಕಿದ್ದ   ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಐತಿಹಾಸಿಕ ಚಿತ್ರ ಸಂತೆಯಲ್ಲಿ  ನಿಂತ ಕಬೀರ  ಕಳೆದ ವಾರವಷ್ಟೇ ರಾಜ್ಯಾದ್ಯಂತ   ಬಿಡುಗಡೆಯಾಗಿತ್ತು.    14ನೇ ಶತಮಾನದಲ್ಲಿ  ಸಂತನಾಗಿ ಭಾರತೀಯ ಪರಂಪರೆ ಮತ್ತು ಸಮಾಜ ಸುಧಾರಣೆಯಲ್ಲಿ  ತನ್ನದೇ ಪಾತ್ರವನ್ನು  ವಹಿಸಿದ್ದ  ಕಬೀರನ  ಚಿತ್ರವನ್ನು   ಇಂದ್ರ ಬಾಬು ತೆರೆಯ ಮೇಲೆ  ಅಚ್ಚುಕಟ್ಟಾಗಿ  ನಿರೂಪಿಸಿದ್ದರು. ಸಿನಿಮಾ ನೋಡಿದ  ಎಲ್ಲರೂ  ಶಿವಣ್ಣ  ಅವರ ಅಭಿನಯವನ್ನು  ಮನಸಾರೆ ಹೊಗಳಿದ್ದಾರೆ. ನಿರ್ಮಾಪಕ  ಕುಮಾರಸ್ವಾಮಿ ಪತ್ತಿಕೊಂಡ  ಚಿತ್ರದ ಬಗ್ಗೆ  ವೀಕ್ಷಕರ ರೆಸ್ಪಾನ್ಸ್  ಕಂಡು ಖುಷಿಯಾಗಿದ್ದಾರೆ.  ಈ ಗೆಲುವಿನ ಸಂತಸವನ್ನು  ಹಂಚಿಕೊಳ್ಳಲೆಂದೇ  ಕಬೀರ ಚಿತ್ರತಂಡ  ಕಳೆದ ಬುಧವಾರ ಮಾಧ್ಯಮಗಳ ಮುಂದೆ  ಹಾಜರಾಗಿತ್ತು.

ಮೊದಲು ಮಾತನಾಡಿದ ಶಿವಣ್ಣ  ಚಿತ್ರವನ್ನು  ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ ಇತ್ತು. ಆದರೆ  ಎಲ್ಲರಿಂದ ಬರುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗುತ್ತಿದೆ, 14ನೇ ಶತಮಾನದ  ಕಥೆಯನ್ನು ಜನ ಇಷ್ಟಪಟ್ಟಿದ್ದಾರೆ. ನಿರ್ದೇಶಕ  ಇಂದ್ರಬಾಬು ಇಡೀ ಚಿತ್ರವನ್ನು  ಕೇವಲ 45ದಿನದಲ್ಲಿ  ಚಿತ್ರೀಕರಿಸಿದ್ದಾರೆ. ಎಲ್ಲೂ  ಸಮಯ ವೇಸ್ಟ್  ಮಾಡಿಲ್ಲ. ನಾನು ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲಿಂ  ಈ ಮೂರೂ ಭಾಷೆ ಶಾಲೆ ಹಾಗೂ ಕಾಲೇಜುಗಳಲ್ಲಿ ಓದಿದ್ದೇನೆ. ನನಗೆ ಎಲ್ಲರ ಜೊತೆ ಒಡನಾಟ ಇದ್ದಿದ್ದರಿಂದ ಇಂತಹ ಪಾತ್ರ ನಿರ್ವಹಿಸಲು ಅನುಕೂಲವಾಯಿತು.  ಈ  ಚಿತ್ರವನ್ನು   ವೀಕ್ಷಕರು ಇಷ್ಟಪಟ್ಟಿರುವುದು  ಮುಂದೆ ನಮಗೂ ಇಂಥ ಪಾತ್ರಗಳನ್ನು ಮಾಡಲು ಸ್ಪೂರ್ತಿಯಾಗಿದೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಇಂಥಾ ಚಿತ್ರಗಳು ಜನರನ್ನು  ಕೂಡ ಗೆಲ್ಲಬೇಕು ಎಂದು  ಹೇಳಿದರು.

ನಂತರ ನಿರ್ಮಾಪಕರು ಮಾತನಾಡುತ್ತ ಚಿತ್ರದ ಕಲೆಕ್ಷನ್  ಆರಂಭದಲ್ಲಿ ಹೇಗಿತ್ತೋ  ಈಗಲೂ ಹಾಗೇ ಇದೆ. ಖಂಡಿತ ಈ ಚಿತ್ರಕ್ಕೆ  ಅವಾರ್ಡ್ ಬರುತ್ತೆ, ಮುಖ್ಯವಾಗಿ ಶಿವಣ್ಣ ಅವರಿಗೆ  ಪ್ರಶಸ್ತಿ ಬರಲೇಬೇಕು. ಹಣ ಬರುತ್ತೋ ಬಿಡುತ್ತೋ ಗೊತ್ತಿಲ್ಲ , ಆದರೆ ಶಿವಣ್ಣಗೆ  ಅವಾರ್ಡ್ ಬಂದರೆ ನಮಗೆ ಖುಷಿ ಎಂದರು. ನಿರ್ದೇಶಕ ಇಂದ್ರಬಾಬು, ನಟಿ ಸಂಜನಾ, ಶಿವಕುಮಾರ್ ಮೊದಲಾದವರು  ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು  ತಮ್ಮ  ಖುಷಿಯನ್ನು  ಹಂಚಿಕೊಂಡರು.

Facebook Comments

Sri Raghav

Admin