ಯಶ್ @ 31 : ಜೋರಾಗಿತ್ತು ಹುಟ್ಟುಹಬ್ಬದ ಸೆಲೆಬ್ರೇಷನ್, ಚಿನ್ನದ ಕತ್ತಿ ಗಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Yash

ಬೆಂಗಳೂರು, ಜ.8- ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ 31ನೆ ಹುಟ್ಟುಹಬ್ಬವನ್ನು ಪತ್ನಿ ಮತ್ತು ಕುಟುಂಬದೊಂದಿಗೆ ಹೊಸಕೆರೆ ಹಳ್ಳಿಯ ತಮ್ಮ ನಿವಾಸದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡರು. ಅಪಾರ ಸಂಖ್ಯೆಯ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿ ಶುಭಾಶಯ ಕೋರಿದರು. ವಿವಾಹದ ಬಳಿಕ ಇದೇ ಮೊದಲ ಹುಟ್ಟುಹಬ್ಬವಾಗಿದ್ದು, ಪತ್ನಿ ರಾಧಿಕಾರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. 2008ರಲ್ಲಿ ಮೊಗ್ಗಿನ ಮನಸು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಎಂಟ್ರಿ ಕೊಟ್ಟ ಯಶ್ ನಂತರ ರಾಕಿ, ಕಿರಾತಕ, ರಾಜಧಾನಿ, ಗೋಕುಲ, ಗೂಗ್ಲಿ, ಕಳ್ಳರ ಸಂತೆ, ಲಕ್ಕಿ, ಜಾನು, ಡ್ರಾಮಾ, ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ, ಮಾಸ್ಟರ್ ಪೀಸ್, ಇತ್ತೀಚೆಗೆ ತೆರೆಕಂಡ ಸಂತು ಸ್ಟ್ರೈಟ್ ಫಾರ್ವರ್ಡ್ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

2d8ba8de-dfad-45ea-a3a2-f589b898b20d ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ನಟ ಯಶ್ ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಮನೆಮಾತಾಗಿದ್ದಾರೆ.  ಇದೇ ವೇಳೆ ಶ್ರೀ ಕೃಷ್ಣ ಜ್ಯುವೆಲರಿಯವರು 74 ಗ್ರಾಂ ತೂಕದ ಚಿನ್ನದ ಕತ್ತಿಯನ್ನು ಕೇಕ್ ಕತ್ತರಿಸಲು ಉಡುಗೊರೆಯಾಗಿ ನೀಡಿದರು. ಹಲವಾರು ಸಮಾಜ ಸೇವೆಯಲ್ಲಿಯೂ ಪಾಲ್ಗೊಂಡು ಜನಮನ ಗೆದ್ದಿದ್ದಾರೆ.

e2378e28-7eb5-47ea-a190-45348a6cbb96

ಇಂದು ಅಂಧ ಅಭಿಮಾನಿಗಳನ್ನು ಭೇಟಿ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಕಲಾ ವಿಕ್ರಮ ರಾಕಿಂಗ್ ಸ್ಟಾರ್ ಯಶ್ ಎಂದು ಅಭಿಮಾನಿಗಳು ಬಿರುದು ನೀಡಿದ್ದು, ದಾಂಪತ್ಯ ಜೀವನ ಹಾಗೂ ಚಿತ್ರರಂಗದಲ್ಲಿ ಯಶಸ್ಸು ಕಾಣಲಿ ಎಂದು ಅಭಿಮಾನಿಗಳು ಆಶೀರ್ವದಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

dddd

Facebook Comments

Sri Raghav

Admin