ಯಾತ್ರಿನಿವಾಸ ಶೀಘ್ರ ಉದ್ಘಾಟನೆ : ಶಾಸಕ

ಈ ಸುದ್ದಿಯನ್ನು ಶೇರ್ ಮಾಡಿ

1

ಹೂವಿನಹಡಗಲಿ,ಸೆ.29-ಪಟ್ಟಣದ ರಾಜ್‍ಭಾಗ್ ಯಮನೂರುಸ್ವಾಮಿ ದರ್ಗಾದ ಆವರಣದಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸದ ಕಟ್ಟಡವನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಭರವಸೆ ನೀಡಿದರು.  ಅವರು ದರ್ಗಾದ ಆವರಣದಲ್ಲಿ ರಕ್ಷಣಾಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನವನ್ನು ನೀಡುವುದಾಗಿ ಎಂದರು. ಅಲ್ಲದೇ, ತಮ್ಮ ತಾಯಿಯ ವರಾದ ಗಂಗಮ್ಮ ಅವರ ಸ್ಮರಣೆಗಾಗಿ ದರ್ಗಾದ ಕಟ್ಟೆಗೆ ಟೈಲ್ಸ್ ಕಾಮಗಾರಿಗೆ 1 ಲಕ್ಷ ರೂ. ದೇಣಿಗೆಯನ್ನು ನೀಡುವುದಾಗಿ ಹೇಳಿದರು.
ಭಾವೈಕ್ಯತೆಯ ಸ್ಥಳವಾದ ರಾಜ್‍ಭಾಗ್‍ದರ್ಗಾದ ಆವರಣದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಜರುಗುವ ಉರುಸ್ ಸಂದರ್ಭದಲ್ಲಿ ಭಕ್ತಾಧಿಗಳು ತಮ್ಮ ಹರಿಕೆ ತೀರಿಸಲು ದೀಡನಮಸ್ಕಾರ ಹಾಕಲು ಅನುಕೂಲವಾಗುವ ರೀತಿಯಲ್ಲಿ ಆವರಣದಲ್ಲಿ ಸಿ.ಸಿ. ರಸ್ತೆಗೆ ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು. ಪುರಸಭೈ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿ, ದರ್ಗಾ ಆವರಣದಲ್ಲಿ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸುವಂತೆ ತಿಳಿಸಿದರು.

ಸಂದರ್ಭದಲ್ಲಿ ತಾ.ಪಂ. ಉಪಾಧ್ಯಕ್ಷ ಹೊನ್ನಪ್ಪ .ಕೆ, ಪುರಸಭೆ ಅಧ್ಯಕ್ಷೆ ಆರ್. ಪವಿತ್ರ, ಉಪಾಧ್ಯಕ್ಷ ರಹಿಮಾನ್, ಸದಸ್ಯರಾದ ಖಾಜಾಹುಸೇನ್, ಇರ್ಫಾನ್, ಸಮಾಜದ ಮುಖಂಡರಾದ ವಾರದ ಗೌಸ್ ಮೊಹಿದ್ದೀನ್, ಕಾದಗ ಗೌಸ್‍ಮೊಹಿದ್ದೀನ್, ಅರವಳ್ಳಿ ವೀರಣ್ಣ, ಸಿ.ಚಾಂದಸಾಬ್, ಶಫಿ, ಡಿ.ಮೆಹಬೂಬ್, ಕೆ. ಫಕೃದ್ದೀನ್, ಜಿ.ವಸಂತ, ಕೆ.ಪತ್ರೇಶ್, ಈಟಿ ಹನುಮೇಶ್, ಚಂದ್ರನಾಯ್ಕ ವಕೀಲ್, ಪುರಸಭೈ ಮುಖ್ಯಾಧಿಕಾರಿ ಜಿ.ಪ್ರೇಮ್‍ಚಾಲ್ರ್ಸ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

2

ಹಡಗಲಿ ಘಟಕಕ್ಕೆ ಶೀಘ್ರ ಬಸ್ ಸಂಚಾರ
ಹೂವಿನಹಡಗಲಿ,ಸೆ.29- ಪಟ್ಟಣದ ಸಾರಿಗೆ ಘಟಕಕ್ಕೆ ನೂತನ ಬಸ್ಸುಗಳನ್ನು ನೀಡುವುದಾಗಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು. ಪಟ್ಟಣದ ಸಾರಿಗೆ ಸಂಸ್ಥೆಯ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಅವರು ಕಿಡಿಕಾರಿದರು. ಬಸ್ಸಿನಲ್ಲಿ ಸ್ವಚ್ಚತೆ ಇಲ್ಲದಿರುವುದು ಮತ್ತು ಬಸ್ಸುಗಳ ದುರಸ್ಥಿಯಲ್ಲಿ ಆಗಿಂದಾಗ್ಗೆ ನಡೆಯುವ ಯಡವಟ್ಟುಗಳು ಗಮನಕ್ಕೆ ಬಂದಿದ್ದು, ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವಂತೆ ಅಧಿಕಾರಿ ವೆಂಕಟೇಶರವರಿಗೆ ತಾಕೀತು ಮಾಡಿದರು. ಅಲ್ಲದೇ, ಬಹುಬೇಡಿಕೆಯ ಹಡಗಲಿ-ಧರ್ಮಸ್ಥಳ ಬಸ್‍ಸಂಚಾರ ಸ್ಥಗಿತ ಗೊಂಡ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಸಾರಿಗೆ ಸಂಸ್ಥೆಯಲ್ಲಿ ಲಾಭದ ಮೂಲ ಒಂದೇ ಅಲ್ಲ, ಸೇವಾ ಮನೋಭಾವನೆಯನ್ನು ಕೂಡಾ ಬೆಳೆಸಿಕೊಳ್ಳಬೇಕೆಂದರು.

 

ಹೊಸಪೇಟೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹಮ್ಮದ್ ಫಯಾಜ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ಈ ಹಿಂದೆ ಸಾರಿಗೆ ಸಚಿವರೊಂದಿಗೆ ಹಡಗಲಿ ಘಟಕಕ್ಕೆ 25 ಹೊಸ್ ಬಸ್‍ಗಳನ್ನು ನೀಡುವಂತೆ ಮಾತನಾಡಿದ್ದೆ, ಈ ವಿಚಾರದ ಪ್ರಸ್ತಾವನೆ ಏನಾಯ್ತು ಎನ್ನುವ ಬಗ್ಗೆ ನೀವು ನನ್ನೊಂದಿಗೆ ಮಾತನಾಡಲೇ ಇಲ್ಲ ಎಂದು ಪರಮೇಶ್ವರನಾಯ್ಕ ದಬಾಯಿಸಿದರು.
ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮುಂದಿನ ತಿಂಗಳ ಒಳಗೆ, ಸ್ಥಳೀಯ ಸಾರಿಗೆ ಘಟಕಕ್ಕೆ 25 ಹೊಸ ಬಸ್‍ಗಳು ಬರಲಿವೆ ಎಂದು ತಿಳಿಸಿದರು.
ಹಡಗಲಿ-ರಾಣೆಬೆನ್ನೂರು ಬಸ್‍ಸಂಚಾರದ ಮಾರ್ಗ ಸ್ಥಗಿತಗೊಂಡ ಬಗ್ಗೆ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ್ರು ಶಾಸಕರ ಗಮನ ಸೆಳೆದಾಗ, ಮಧ್ಯ ಪ್ರವೇಶಿಸಿದ ಎಡಬ್ಲ್ಯೂ.ಎಸ್ ವೆಂಕಟೇಶ್, ನಾಳೆಯಿಂದಲೇ ರಾಣೆಬೆನ್ನೂರು ಬಸ್ ಸಂಚಾರವನ್ನು ಆರಂಭಗೊಳಿಸುವುದಾಗಿ ತಿಳಿಸಿದರು. ಅಲ್ಲದೇ, ಹಡಗಲಿ, ಧರ್ಮಸ್ಥಳ ಬಸ್ ಸಂಚಾರವನ್ನು ಅ. 5ರಿಂದ ಆರಂಭಿಸುವುದಾಗಿ ಹೇಳಿದರು.

 

► Follow us on –  Facebook / Twitter  / Google+

Facebook Comments

Sri Raghav

Admin