ಯಾರಿಗೇ ಟಿಕೆಟ್ ನೀಡಿದರೂ ಬಿಜೆಪಿ ಗೆಲುವಿಗೆ ಬದ್ಧ

ಈ ಸುದ್ದಿಯನ್ನು ಶೇರ್ ಮಾಡಿ

Bangarapete

ಬಂಗಾರಪೇಟೆ, ಅ.21-  ಮುಂಬರುವ ವಿಧಾನಸಭೆ ಚುನಾವಣೆಗೆ ಬಂಗಾರಪೇಟೆ ಮೀಸಲು ಕ್ಷೇತ್ರದ ಬಿಜೆಪಿ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹೈಕಮ್ಯಾಂಡ್ ಆದೇಶಕ್ಕೆ ತಲೆ ಬಾಗಿ ಯಾರಿಗೇ ಟಿಕೆಟ್ ನೀಡಿದರು ತಾವು ಒಗ್ಗಟ್ಟಿನಿಂದ  ಶ್ರಮಿಸಿ ಪಕ್ಷದ ಗೆಲುವಿಗೆ ಬದ್ಧ ಎಂದು ಕಾರ್ಯಕರ್ತರ ಮುಂದೆ ಪ್ರಮಾಣ ಮಾಡಿದರು. ಪಟ್ಟಣದ ವಿಬಿಆರ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನವ ಕರ್ನಾಟಕ ಪರಿವರ್ತನಾ ರ್ಯಾಲಿ ಅಂಗವಾಗಿ ನಡೆದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ತಮ್ಮಿಬ್ಬರಲ್ಲಿ ಯಾರಿಗೇ ಬಿಜೆಪಿ ಟಿಕೇಟ್ ನೀಡಿದರೂ ತಾವು ಒಗ್ಗಟ್ಟಿನಿಂದ ಇರುತ್ತೀರಾ  ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟಿಕೆಟ್ ಆಕಾಂಕ್ಷಿಗಳು ಎದ್ದು ನಿಂತು ಒಬ್ಬರೊಬ್ಬರ ಕೈಗಳನ್ನು ಮೇಲಕ್ಕೆ ಎತ್ತಿ ತಮ್ಮಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಲು ಶಕ್ತಿಮೀರಿ ದುಡಿಯುವುದಾಗಿ ತಿಳಿಸಿದರು.

ಶತಾಯ ಗತಾಯ ಬಿಜೆಪಿಯನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರಮೋದಿ, ರಾಷ್ಟ್ರಾಧ್ಯಕ್ಷ ಅಮಿದ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಯೂರಪ್ಪ ರವರ ಕೈಯನ್ನು ಬಲಪಡಿಸುವುದೇ ನಮ್ಮ ಏಕೈಕ ಗುರಿಯಾಗಿದೆ. ಹಾಗಾಗಿ ನಮ್ಮಲ್ಲಿ ಯಾರಿಗೇ ಟಿಕೆಟ್ ನೀಡಿದರೂ ದುಡಿಯುತ್ತೇವೆ ಎಂದು ಕಾರ್ಯಕರ್ತರಲ್ಲಿದ್ದ ಅನುಮಾಗಳನ್ನು ದೂರ ಮಾಡಿ ಆತ್ಮಸ್ಥೈರ್ಯ ತುಂಬಿದರು. ಇತ್ತೀಚೆಗೆ ಸುರಿದ ಮಳೆಯಿಂದ ಕ್ಷೇತ್ರದಲ್ಲಿ ಮಾಡಿಸಿರುವ ಕಾಮಗಾರಿಗಳ ಗುಣಮಟ್ಟ ಹೇಗಿದೆ ಎಂಬುದು ಪ್ರತ್ಯಕ್ಷವಾಗಿ ಕಂಡು ಬರುತ್ತಿದೆ. ರಸ್ತೆಗಳೆಲ್ಲಾ ಚದುರುಹೋಗಿ ಅಲ್ಲಲ್ಲಿ ಗುಂಡಿಗಳು ಬಿದ್ದು ಬಾಯಿ ತೆರೆದುಕೊಂಡಿದೆ. ಇದರಿಂದ ಕಾಮಗಾರಿಯ ಕಳಪೆ ಮಟ್ಟ ಬಟಾಬಯಲಾಗಿದೆ ಅಭಿವೃದ್ದಿ ಕೆಲಸಗಳನ್ನು ಹೇಗೆ ಮಾಡಿಸಲಾಗಿದೆ ಎಂಬುದನ್ನು ತಿಳಿಯಬಹುದಾಗಿದೆ ಎಂದರು.

ನ.2ರಂದು ಬೆಂಗೂರಿನಲ್ಲಿ ನಡೆಯಲಿರುವ ನವ ಕರ್ನಾಟಕ ನಿರ್ಮಾಣ ಕಾರ್ಯಕ್ರಮಕ್ಕೆ ಪ್ರತಿ ಮತಗಟ್ಟೆ ಕೇಂದ್ರದಿಂದ 3 ಬೈಕ್ ಸೇರಿ ಒಟ್ಟು 254 ಮತ ಗಟ್ಟೆಗಳಿಂದ 762 ಬೈಕ್‍ಗಳಿಂದ ಹೊರಡಲು ತೀರ್ಮಾನಿಸಲಾಯಿತು. ಜಿಪಂ ಸದಸ್ಯ ಬಿ.ವಿ.ಮಹೇಶ್, ತಾಲ್ಲೂಕು ಅಧ್ಯಕ್ಷ ಹನುಮಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಮಾರ್ಕಂಡೇಗೌಡ, ಮುಖಂಡ ಸೂಲಿಕುಂಟೆ ಶ್ರೀನಿವಾಸಗೌಡ, ಎಪಿಎಂಸಿ ನಿದೇಶಕ ಕುಪ್ಪನಹಳ್ಳಿ ನಾರಾಯಣಸ್ವಾಮಿ, ನಗರ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಕೆಇಬಿ ರಮೇಶ್ ಇದ್ದರು.

Facebook Comments

Sri Raghav

Admin