ಯಾವುದೇ ಕಾನೂನು ತಂದರೂ ಜಲ್ಲಿಕಟ್ಟು ನಡೆಸಲೇಬೇಕು : ರಜನೀಕಾಂತ್

ಈ ಸುದ್ದಿಯನ್ನು ಶೇರ್ ಮಾಡಿ

Jellikattu

ನವದೆಹಲಿ, ಜ.14- ತಮಿಳುನಾಡಿನ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಕ್ರೀಡೆ ಜಲ್ಲಿಕಟ್ಟು ಪರವಾಗಿ ಸೂಪರ್ ಸ್ಟಾರ್ ಕಮಲ್‍ಹಾಸನ್ ಬೆಂಬಲ ವ್ಯಕ್ತಪಡಿಸಿದ ಬಳಿಕ ಮತ್ತೊಬ್ಬ ಸೂಪರ್ ಸ್ಟಾರ್ ತಲೈವ ರಜನೀಕಾಂತ್ ಅವರು ಜಲ್ಲಿಕಟ್ಟು ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.   ಯಾವುದೇ ಕಾನೂನು ನಿಯಮಗಳನ್ನು ತಂದರೂ ಜಲ್ಲಿಕಟ್ಟು ಕ್ರೀಡೆ ನಡೆಸಲೇಬೇಕು. ಏಕೆಂದರೆ, ಅದು ತಮಿಳರ ಪ್ರಾಚೀನ ಸಂಸ್ಕøತಿಯ ದ್ಯೋತಕವಾಗಿದೆ. ನಾವದನ್ನು ಕೈಬಿಡಲಾರೆವು ಎಂದು ರಜನಿಕಾಂತ್ ಹೇಳಿದ್ದಾರೆ. ವಿಕಟನ್ ಫಿಲಂ ಅವಾರ್ಡ್ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಜನೀಕಾಂತ್, ಜಲ್ಲಿಕಟ್ಟು ತಮಿಳಿಗರ ಪಾರಂಪರಿಕ ಕ್ರೀಡೆ. ಇದನ್ನು ಆಚರಿಸುವುದು ತಮಿಳರ ಸಂಸ್ಕøತಿಯ ಪ್ರತೀಕವಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಇಂಡಿಯಾ ಟುಡೆ ಕಾನ್ಲೇವ್‍ನಲ್ಲಿ ಮಾತನಾಡಿದ ನಟ ಕಮಲ್‍ಹಾಸನ್ ಅವರು ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿಯನ್ನು ಕೂಡ ಬ್ಯಾನ್ ಮಾಡಬೇಕು ಎಂದು ಹೇಳಿದ್ದರು. ನಾನು ಜಲ್ಲಿಕಟ್ಟು ಕ್ರೀಡೆಯ ದೊಡ್ಡ ಅಭಿಮಾನಿ. ಬಹುಶಃ ಜಲ್ಲಿಕಟ್ಟು ಕ್ರೀಡೆ ಆಡಿರುವ ಕೆಲವೇ ಕೆಲವು ಚಿತ್ರನಟರಲ್ಲಿ ನಾನೂ ಒಬ್ಬ. ಹಾಗಾಗಿ ನಾನು ತಮಿಳನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಏಕೆಂದರೆ, ಅದು ನಮ್ಮ ಸಂಸ್ಕøತಿಯಾಗಿದೆ ಎಂದು ಹೇಳಿದ್ದರು. ಇದೇ ವೇಳೆ ಸಿನಿಮಾರಂಗದ ಇತರೆ ಕಲಾವಿದರಲ್ಲಿ ಧನುಷ್ ಮತ್ತು ಗೌತಮಿ ಕೂಡ ಜಲ್ಲಿಕಟ್ಟು ಬೆಂಬಲಿಸಿ ಮಾತನಾಡಿದ್ದರು. ಸುಪ್ರೀಂಕೋರ್ಟ್ 2014ರ ಮೇನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿದಯಾ ಹಿತಾಸಕ್ತಿಯಲ್ಲಿ ನಿಷೇಧಿಸಿತ್ತು. ಪೊಂಗಲ್  ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಸುಪ್ರೀಂಕೋರ್ಟ್ ಆದೇಶದಿಂದ ಈ ಆಚರಣೆಗೆ ನಿರ್ಬಂಧ ಉಂಟಾಗಿದ್ದು, ಅಲ್ಲಿನ ಜನ ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ.

ನಿನ್ನೆಯಿಂದ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಹೋರಾಟ, ಪ್ರತಿಭಟನೆ ನಡೆಸುತ್ತಿವೆ. ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಈ ವರ್ಷ ಜಲ್ಲಿಕಟ್ಟು ನಡೆಯುವುದು ಖಚಿತ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin