ಯಾವುದೇ ಕ್ಷಣದಲ್ಲಾದರೂ ಕೇಂದ್ರ ಸಚಿವ ಸಂಪುಟ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Cabinet--01

ನವದೆಹಲಿ, ಜು.19- ಕೇಂದ್ರ ಸಚಿವ ಸಂಪುಟ ಯಾವುದೇ ಕ್ಷಣದಲ್ಲಾದರೂ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ. ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ವೆಂಕಯ್ಯನಾಯ್ಡು ಆಯ್ಕೆಯಾಗಿರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಪ್ರಮುಖವಾಗಿ ರಕ್ಷಣಾ ಖಾತೆ, ನಗರಾಭಿವೃದ್ಧಿ ಇಲಾಖೆ ಹಾಗೂ ಪರಿಸರ ಖಾತೆಗೆ ಖಾಯಂ ಸಚಿವರೊಬ್ಬರನ್ನು ನೇಮಿಸಲು ಮೋದಿ ನಿರ್ಧರಿಸಿದ್ದಾರೆ.  ಉಪರಾಷ್ಟ್ರಪತಿ ಚುನಾವಣೆ ಮುಗಿಯುವುದ ರೊಳಗೆ ಸಂಪುಟ ವಿಸ್ತರಣೆಗೆ ಆಗಬಹುದು ಎಂಬು ದನ್ನು ಹೇಳಲಾಗುತ್ತಿದ್ದು, ಇದಕ್ಕೆ ಅನುಭವಿ ಮತ್ತು ಸಮರ್ಥ ಸಂಸದರೊಬ್ಬರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ.

ಹೆಚ್ಚುವರಿಯಾಗಿ ರಕ್ಷಣಾ ಖಾತೆಯನ್ನು ಹೊಂದಿ ರುವ ವಿತ್ತ ಸಚಿವ ಅರುಣ್ಜೈಟ್ಲಿ ಅವರಿಗೆ ಜಿಎಸ್ಟಿ ಜಾರಿಯಿಂದ ಹೆಚ್ಚಿನ ಹೊರ ಆಗುವುದರಿಂದ ಬಹು ಬೇಗ ಅವರಿಗೆ ಒತ್ತಡ ತಗ್ಗಿಸಲು ಮೋದಿ ನಿರ್ಧರಿಸಿ ದ್ದಾರೆ.  ಮೂಲಗಳ ಪ್ರಕಾರ ಹಲವು ಸಚಿವರ ಖಾತೆಗಳು ಕೂಡ ಬದಲಾಗಲಿದ್ದು, ಪ್ರಸ್ತುತ ಯೋಜನಾ ಅನುಷ್ಠಾನ ಸಚಿವರಾಗಿರುವ ಸದಾನಂದಗೌಡ ಅವರಿಗೆ ಪ್ರಮುಖ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಇದರ ನಡುವೆಯೇ ಅನಂತ್ಕುಮಾರ್ ಅವರಿಗೂ ಪುನಃ ನಗರಾಭಿವೃದ್ಧಿ ಖಾತೆ ನೀಡುವ ಬಗ್ಗೆ ಒಲವು ತಳೆಯಲಾಗಿದೆ.

ರಾಜ್ಯಕ್ಕೆ ಮತ್ತೊಂದು ಸಚಿವ ಸ್ಥಾನ ಸಿಕ್ಕರೂ ಅಚ್ಚರಿ ಪಡುವ ಅಗತ್ಯವಿಲ್ಲ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.  ಈಗಾಗಲೇ ಹೊಸ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ತಮ್ಮ ಸ್ಥಾನ ಅಲಂಕರಿಸುವ ಸಂದರ್ಭದಲ್ಲೇ ತಮ್ಮ ಕಾರ್ಯಭಾರವನ್ನು ಮತ್ತಷ್ಟು ಚುರುಕುಗೊಳಿಸಿ ಮುಂದಿನ 2019ರ ಚುನಾವಣೆಯತ್ತ ಬಿಜೆಪಿ ಲೆಕ್ಕಾಚಾರ ಶುರು ಮಾಡಿದೆ. ವರ್ಷಾಂತ್ಯಕ್ಕೆ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯುವು ದರಿಂದ ಆ ಭಾಗದ ಸಂಸದರೇ ಸಚಿವರಾಗುವ ಯೋಗ ಕೂಡಿ ಬರಲಿದೆ ಎಂದು ಕೂಡ ಹೇಳಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin