ಯುಎಇಯಲ್ಲಿ ಮಿನಿ ಐಪಿಎಲ್‍ ನಡೆಸಲು ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Mini-IPL

ನವದೆಹಲಿ, ಜೂ.29- ಐಪಿಎಲ್ ಕ್ರೇಜ್ ಏರುತ್ತಿರುವುದನ್ನು ಗಮನಿಸಿ ಯುಎಇಯಲ್ಲಿ ಮಿನಿ ಐಪಿಎಲ್ ನಡೆಸಲು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಚಿಂತನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಐಪಿಎಲ್ ಪ್ರಾಯೋಜಕತ್ವದ ಬಿಡ್ಡಿಂಗ್‍ನಲ್ಲಿ ವಿವೋ ಕಂಪನಿಯು ಐಪಿಎಲ್ ಮುಂದಿನ 5 ವರ್ಷಗಳಿಗೆ 2100 ಕೋಟಿ ರೂ. ಗಳನು ವ್ಯಯಿಸುವ ಮೂಲಕ ಅಚ್ಚರಿ ಮೂಡಿಸಿತ್ತು.  ಈ ಬೆನ್ನಲ್ಲೇ ಯುಎಇಯಲ್ಲಿ ಮಿನಿ ಐಪಿಎಲ್ ಅನ್ನು ನಡೆಸಲು ಶುಕ್ಲಾ ಚಿಂತಿಸಿರುವುದು ಗಮನ ಸೆಳೆದಿದೆ.

ಅಲ್ಲದೆ ಇದೇ ವೇಳೆ ಮುಂಬರುವ 10 ವರ್ಷಗಳ ಐಪಿಎಲ್ ಬಗ್ಗೆಯೂ ರಾಜೀವ್ ಶುಕ್ಲಾ ಅವರು ಮಹತ್ತರ ಪ್ಲ್ಯಾನ್ ಅನ್ನು ಹೆಣೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಿನಿ ಐಪಿಎಲ್‍ನಲ್ಲಿ 8 ತಂಡಗಳು ಪಾಲ್ಗೊಳ್ಳಲಿದ್ದು ಅನಿವಾರ್ಯವಾದರೆ 10 ತಂಡಗಳು ಸೇರ್ಪಡೆ ಮಾಡಲಾಗುವುದು ಎಂದು ಶುಕ್ಲಾ ತಿಳಿಸಿದರು. ಈ ಹಿಂದೆ 2014ರಲ್ಲಿ ಭಾರತ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಐಪಿಎಲ್ 7ರ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin