ಯುಎನ್‍ಎಸ್‍ಸಿ ಸುಧಾರಣೆಗೆ ಕ್ರಮ : ಶಾಶ್ವತ ಸ್ಥಾನಕ್ಕಾಗಿ ಭಾರತ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Nikhy-Halya

ನ್ಯೂಯಾರ್ಕ್, ಮಾ.30-ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‍ಎಸ್‍ಸಿ) ಸುಧಾರಣೆ ಆಲೋಚನೆಯನ್ನು ತಾವು ಮುಕ್ತವಾಗಿ ಇರಿಸಿರುವುದಾಗಿ ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿ ಆಗಿರುವ ನಿಕ್ಕಿ ಹ್ಯಾಲೇ ಹೇಳಿದ್ದಾರೆ. ಆದರೆ ವಿಸ್ತರಣೆಯಾಗುವ ಮಂಡಳಿಯಲ್ಲಿ ಭಾರತದಂಥ ದೇಶಗಳು ಶಾಶ್ವತ ಸದಸ್ಯತ್ವ ಪಡೆಯಲಿವೆಯೇ ಎಂಬ ಬಗ್ಗೆ ಅವರು ತಿಳಿಸಿಲ್ಲ.  ಇದೇ ವೇಳೆ, ನಿಕ್ಕಿ ಹೇಳಿಕೆಯನ್ನು ಸ್ವಾಗತಿಸಿರುವ ಭಾರತ, ಯುಎನ್‍ಎಸ್‍ಸಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯುವ ಆಶಾಭಾವನೆ ವ್ಯಕ್ತಪಡಿಸಿದೆ.

ವಿದೇಶಾಂದ ಸಂಬಂಧಗಳ ಮಂಡಳಿ (ಸಿಎಫ್‍ಆರ್) ಸಭೆಯಲ್ಲಿ ನಿನ್ನೆ ಭಾಷಣ ಮಾಡಿದ ನಂತರ ಭದ್ರತಾ ಮಂಡಳಿ ಸುಧಾರಣೆ ಮತ್ತು ಪುನಾರಚನೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿಕ್ಕಿ, ಈ ಬಗ್ಗೆ ನಾನು ಮುಕ್ತ ಮನಸ್ಸು ಹೊಂದಿದ್ದೇವೆ. ಭದ್ರತಾ ಮಂಡಳಿ ಸುಧಾರಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಮಧ್ಯೆ, 193 ಸದಸ್ಯರ ವಿಶ್ವಸಂಸ್ಥೆಯ ಅಂಗಸಂಸ್ಥೆಯನ್ನು ಪುನಾರಚನೆಗೆ ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸ್ಥಾನ ಲಭಿಸುವ ಆಶಾಭಾವನೆ ಹೊಂದಿರುವುದಾಗಿ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಸ್ಥಾನ ಉದ್ದೇಶದ ಸಂಧಾನಕಾರರಾದ ಅಂಜನಿ ಕುಮಾರ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin