ಯುಎಸ್ ಓಪನ್ ಟೆನಿಸ್ : ಪುರುಷರ ಡಬಲ್ಸ್ ನಲ್ಲಿ 2ನೇ ಸುತ್ತು ಪ್ರವೇಶಿಸಿದ ಬೋಪಣ್ಣ-ಫೆಡರಿಕ್ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Roahan-Bopamnna

ನ್ಯೂಯಾರ್ಕ್, ಸೆ.1- ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಟೆನಿಸ್ ತಾರೆಯರು ಶುಭಾರಂಭ ಮಾಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ-ಫೆಡರಿಕ್ ಜೋಡಿಯು ರಾಡೆಕ್ ಸ್ಟೆಪನೆಕ್ ಜೋಡಿಯನ್ನು 6-3, 6-7, 6-3 ನೇರ ಸೆಟ್ಗಳ ಅಂತರದಿಂದ ಸೋಲಿಸಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ.  ಇನ್ನು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ-ಸ್ಟಿಕ್ಕೋವ್ ಜೋಡಿಯು ಅಮೆರಿಕದ ಶ್ರೇಯಾಂಕ ರಹಿತ ಜೋಡಿಯಾದ ಜಾಡಾಮಿಯಾ ಅರ್ಟ್-ಹೆನಾ ಜೋಡಿಯನ್ನು 6-2, 6-3 ಸೆಟ್ಗಳಿಂದ ಸುಲಭ ಗೆಲುವು ಸಾಧಿಸಿ ಎರಡನೆ ಸುತ್ತಿಗೆ ಪ್ರವೇಶಿಸಿದ್ದಾರೆ.  ವಿಶ್ವ ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್-ಮಾರ್ಟಿನ್ ಹಿಂಗೀಸ್ ಜತೆಗೂಡಿ ಕೂಡ ಎರಡನೆ ಸುತ್ತು ಪ್ರವೇಶಿಸಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin