ಯುಗಾದಿ ಅಮಾವಾಸೆಯೆಂದೇ ಭೀಕರ ಅಪಘಾತ : ಇಬ್ಬರ ಸಜಿವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

vijayaura

ವಿಜಯಪುರ,ಮಾ.28- ರಸ್ತೆ ಡಿವೈಡರ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ಕ್ಲೀನರ್ ಸಜೀವ ದಹನಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಬ್ಬಿಣದ ಪೈಪ್‍ಗಳನ್ನು ತುಂಬಿದ ಲಾರಿ ಮಹಾರಾಷ್ಟ್ರದಿಂದ ವಿಜಯಪುರ ಮಾರ್ಗವಾಗಿ ತೆರಳುವಾಗ ಇಲ್ಲಿಗೆ ಸಮೀಪದ ಹಿಟ್ನಳ್ಳಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.ದಹನ ಡಿಕ್ಕಿಯ ರಭಸಕ್ಕೆ ಡಿಸೆಲ್ ಟ್ಯಾಂಕ್‍ಗೆ ಬೆಂಕಿ ತಗುಲಿ ಇಡೀ ಲಾರಿಗೆ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದೆ.

ಬೆಳಗಿನ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಘಟನೆಯಲ್ಲಿ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಡಿಕ್ಕಿ ಆದ ತಕ್ಷಣದಲ್ಲೇ ಕಬ್ಬಿಣದ ಪೈಪ್‍ಗಳು ಲಾರಿ ಕ್ಯಾಬಿನ್ ಒಳಗೆ ನುಗ್ಗಿದ್ದರಿಂದ ಆ ಹೊಡೆತಕ್ಕೆ ಚಾಲಕ ನಿರ್ವಾಹಕ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಸುಟ್ಟು ಹೋಗಿದ್ದರಿಂದ ಎಲ್ಲಿಯ ಲಾರಿ ಹಾಗೂ ಮೃತರ ಗುರುತು ಪತ್ತೆ ಆಗಿಲ್ಲ. ಗ್ರಾಮೀಣ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಲಾರಿ ತೆರವು ಕಾರ್ಯಾಚರಣೆ ಮುಂದುವರೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin