ಯುದ್ದೋತ್ಸಾಹದಲ್ಲಿರುವ ಉತ್ತರ ಕೊರಿಯಾ ಜತೆ ಐರೋಪ್ಯ ಒಕ್ಕೂಟ ವ್ಯಾಪಾರ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

North-Korea--02

ಬ್ರುಸ್ಸೆಲ್ಸ್, ಅ.14-ಉತ್ತರ ಕೊರಿಯಾದ ಪರಮಾಣು ಅಸ್ತ್ರದ ಅಭಿವೃದ್ದಿ ಯೋಜನೆಗೆ ಪ್ರತಿಯಾಗಿ ಐರೋಪ್ಯ ಒಕ್ಕೂಟ ಆ ದೇಶದೊಂದಿಗೆ ವ್ಯಾಪಾರ ಸಂಬಂಧವನ್ನು ಕೊನೆಗೊಳಿಸುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಸೋಮವಾರ ಯೂರೋಪಿಯನ್ ಯೂನಿಯನ್ (ಐಯು) ಅಧಿಕೃತ ನಿರ್ಧಾರ ಪ್ರಕಟಿಸಲಿದೆ. ಪದೇ ಪದೇ ಕ್ಷಿಪಣಿಗಳು ಮತ್ತು ಅಣ್ವಸ್ತ್ರಗಳನ್ನು ಪ್ರಯೋಗಿಸುತ್ತಾ ವಿಶ್ವದಲ್ಲಿ ಅದರಲ್ಲೂ ಏಷ್ಯಾ ಖಂಡದಲ್ಲಿ ಆತಂಕದ ವಾತಾವರಣ ಸೃಷ್ಟಿಸಿರುವ ಉತ್ತರ ಕೊರಿಯಾ ಮೇಲೆ ಈಗಾಗಲೇ ಅಮೆರಿಕ ಪ್ರಬಲ ಆರ್ಥಿಕ ದಿಗ್ಬಂಧನ ವಿಧಿಸಿದ್ದು, ಐರೋಪ್ಯ ಒಕ್ಕೂಟದ ವ್ಯಾಪಾರ ಬಂದ್ ನಿರ್ಧಾರ ಆ ರಾಷ್ಟ್ರಕ್ಕೆ ಮತ್ತೊಂದು ಭಾರೀ ಹೊಡೆತ ನೀಡಲಿದೆ.

ತೈಲ ಮಾರಾಟ, ಹೂಡಿಕೆ ಸೇರಿದಂತೆ ಕೆಲವು ವಾಣಿಜ್ಯ ವಹಿವಾಟುಗಳ ಮೇಲೆ ಐರೋಪ್ಯ ಸಮುದಾಯ ದೇಶಗಳು ನಿರ್ಬಂಧ ವಿಧಿಸಿ ಉತ್ತರ ಕೊರಿಯಾಗೆ ಪಾಠ ಕಲಿಸಲು ಮುಂದಾಗಿವೆ.

Facebook Comments

Sri Raghav

Admin