ಯುದ್ಧಕ್ಕೆ ಬಂದರೆ ಕಾಶ್ಮೀರ ಉಳಿಯುತ್ತೆ, ಪಾಕಿಸ್ತಾನವಿರುವುದಿಲ್ಲ : ನಿವೃತ್ತ ಯೋಧ

ಈ ಸುದ್ದಿಯನ್ನು ಶೇರ್ ಮಾಡಿ

Soldire

ಬಾಗೇಪಲ್ಲಿ, ಅ.1- ಭಾರತದ ಜೊತೆ ಪಾಕಿಸ್ತಾನ ಯುದ್ಧ ಮಾಡಿದರೆ ಜಗತ್ತಿನ ಭೂಪಟದಲ್ಲಿ ಕಾಶ್ಮೀರ ಉಳಿಯುತ್ತದೆ. ಆದರೆ ಪಾಕಿಸ್ತಾನ ಇರುವುದಿಲ್ಲ. ಭಾರತದ ತಂಟೆಗೆ ಬಂದರೆ ಹುಷಾರ್. . ಎಂದು ನಿವೃತ್ತ ಕಾರ್ಗಿಲ್ ಯೋಧ ಬಿ.ಎ.ರಫೀಕ್ ವುಲ್ಲಾ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ ಪಾಕಿಸ್ತಾನ ಇದುವರಿಗೂ 2 ಬಾರಿ ಯುದ್ಧ ಮಾಡಿದೆ. 2 ಬಾರಿಯೂ ಸೋತಿದೆ. ಮೂರನೇ ಬರಿಗೆ ಯುದ್ಧ ಮಾಡಿದರೆ ಪಾಕಿಸ್ತಾನ ಉಳಿಯುವುದಿಲ್ಲ. ಪಾಕಿಸ್ತಾನ ತಮ್ಮ ನರಿ ಬುದ್ದಿ ತೋರಿಸುತ್ತಿದೆ. ಯಾವುದೇ ಯುದ್ಧಗಳಿಗೆ ಭಾರತ ಹೆದರುವುದಿಲ್ಲ. ಭಾರತದ ಸೈನಿಕರು ಮುನ್ನುಗ್ಗಿದರೆ ಪಾಕಿಸ್ತಾನ ಸುಟ್ಟು ಬೂದಿ ಅವಶೇಷಗಳು ಉಳಿಯುವುದಿಲ್ಲ. ಭಾರತದ ಸೈನಿಕರೇ ಎದೆಗುಂದದೇ ಹೋರಾಡಿ. ನಿಮ್ಮೊಂದಿಗೆ ನಿವೃತ್ತ ಯೋಧರು ಇದ್ದೇವೆ ಎಂದು ಭಾರತ ದೇಶದ ಸೈನಿಕರಿಗೆ ತುಂಬಿದ್ದಾರೆ.

ರಾತ್ರಿ ಸಮಯದಲ್ಲಿ ಪಾಕಿಸ್ತಾನ ಭಾರತ ಮೇಲೆ ದಾಳಿ ಮಾಡಿರುವುದು ಖಂಡನೀಯವಾಗಿದೆ. ಭಾರತದ ಸೇನೆಗೆ ಕೇಂದ್ರ ಸರ್ಕಾರಕ್ಕೆ ಇತರೆ ಕಾಂಗ್ರೆಸ್, ಎಡಪಕ್ಷಗಳು, ಪ್ರಾದೇಶಿಕ ಪಕ್ಷಗಳು ಸಾಥ್ ನೀಡುತ್ತಿದ್ದಾರೆ. ಭಾರತದ ಕಮೋಂಡುಗಳಿಗೆ ಕೇಂದ್ರ ಸರ್ಕಾರ ಮತ್ತಷ್ಟು ಪ್ರೊ  ಎಂದು ಮನವಿ ಮಾಡಿದರು. 2 ನೇ ಬಾರಿ ಪಾಕಿಸ್ತಾನ ಯುದ್ಧ ಸಾರಿದಾಗ ನಾನು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದೇ. ಕಾರ್ಗಿಲ್ ಯುದ್ಧದಲ್ಲಿ ತಾವು ಪಾಕಿಸ್ತಾನದ ಜೊತೆ ಹೋರಾಡಿ, ತನ್ನ ಸ್ನೇಹಿತ ಸೈನಿಕರನ್ನು ಕಳೆದುಕೊಂಡಿದ್ದೇನೆ. ಹಾಗೂ ಅಲ್ಲಿನ ಹಿಮ, ಮಂಜಿನ ವಾತಾವರಣದಲ್ಲಿ ಸಿಲುಕಿ ತನ್ನ ಕೈಗಳ 4 ಬೆರಳುಗಳನ್ನು ಕಳೆದುಕೊಂಡಿದ್ದೇನೆ ಎಂದು ಕಾರ್ಗಿಲ್ ಯುದ್ಧದ ಬಗ್ಗೆ ಮೆಲಕು ಹಾಕಿದರು. ಕೇಂದ್ರ ಸರ್ಕಾರ ನಿವೃತ್ತ ಯೋಧರಿಗೆ ಕರೆ ನೀಡಿದರೆ 24 ಗಂಟೆ ಒಳಗೆ ಭಾರತದ ಗಡಿ ಪ್ರದೇಶಗಳಲ್ಲಿ ಹಾಜರಾಗಿ ಪಾಕಿಸ್ತಾನ ಜೊತೆ ಯುದ್ಧ ಮಾಡುತ್ತೇವೆ. ಯುದ್ಧದಲ್ಲಿ ಆಕಸ್ಮಾತ್ತಾಗಿ ಮರಣ ಹೊಂದಿದರೆ ತಾಯಿ ಭಾರತಾಂಬೆಗೆ ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.

 

 

Facebook Comments

Sri Raghav

Admin