ಯುದ್ಧಾಪರಾಧ : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

Rassia

ವಿಶ್ವಸಂಸ್ಥೆ, ಅ.29-ಸಮರಸಂತ್ರಸ್ತ ಸಿರಿಯಾದಲ್ಲಿ ಯುದ್ಧ ಅಪರಾಧಗಳನ್ನು ಎಸಗಿರುವ ಆರೋಪದ ಮೇಲೆ ವಿಶ್ವದ ಅತ್ಯಂತ ಪ್ರಬಲ ದೇಶಗಳಲ್ಲಿ ಒಂದಾದ ರಷ್ಯಾವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರಹಾಕಲಾಗಿದೆ. ಸಿರಿಯಾದಲ್ಲಿ ಐಎಸ್ ಉಗ್ರರನ್ನು ದಮನ ಮಾಡಲು ರಷ್ಯಾ ಯುದ್ಧ ವಿಮಾನ ನಡೆಸಿದ ವಾಯುದಾಳಿಯಲ್ಲಿ 22 ಶಾಲಾ ಮಕ್ಕಳು ಸೇರಿದಂತೆ 28 ಮಂದಿ ಕೊಲ್ಲಲ್ಪಟ್ಟ ದುರಂತದ ಬೆನ್ನಲ್ಲೆ ಮಾಸ್ಕೋ ಈ ಮಹತ್ವದ ಮಂಡಳಿಯಲ್ಲಿ ತನ್ನ ಸ್ಥಾನ ಕಳೆದುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಜಿನಿವಾ ಮೂಲದ ಯುಎನ್‍ಎಚ್‍ಆರ್‍ನ 14 ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಲು ನಿನ್ನೆ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೈಯಲ್ಲಿ ರಷ್ಯಾ ವಿರುದ್ಧ ಮತಚಲಾಯಿಸಲಾಗಿದೆ.
ಯುಎನ್‍ಎಚ್‍ಆರ್‍ನ 14 ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಲು ನಿನ್ನೆ 193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯ ಸಭೈ ರಹಸ್ಯ ಮತದಾನ ನಡೆಸಿತು. ಆದರೆ ಇದರಲ್ಲಿ ರಷ್ಯಾಗೆ ಅವಕಾಶ ಕೈತಪ್ಪಿದೆ.

ಬ್ರೆಜಿಲ್, ಚೀನಾ, ಕ್ರೋವೆಷಿಯಾ, ಕ್ಯೂಬಾ, ಈಜಿಪ್ಟ್, ಹಂಗೇರಿ, ಇರಾಕ್, ಜಪಾನ್, ರುವಾಂಡಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟುನಿಷಿಯಾ, ಯುನೈಟೆಡ್ ಕಿಂಗ್‍ಡಂ ಮತ್ತು ಅಮೆರಿಕ ದೇಶಗಳು ಜನವರಿ 1, 2017ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿವೆ. ಮಾನವ ಹಕ್ಕುಗಳ ಅಂಗಸಂಸ್ಥೆಯ 47 ಸದಸ್ಯರ ರಾಷ್ಟ್ರಗಳಲ್ಲಿ ಭಾರತವು ಸದಸ್ಯತ್ವ ಪಡೆದಿದ್ದು, ಇದರ ಅವಧಿ 2017ರಲ್ಲಿ ಕೊನೆಗೊಳ್ಳಲಿದೆ.

ಮಂಡಳಿಗೆ ಪುನರಾಯ್ಕೆ ಬಯಸಿದ್ದ ರಷ್ಯಾ ಪೂರ್ವ ಯುರೋಪ್ ವಿಭಾಗದಲ್ಲಿ ಎರಡು ಸ್ಥಾನಗಳಿಗಾಗಿ ಹಂಗೇರಿ, ಕ್ರೊವೆಷಿಯಾ ಮತ್ತು ಬಲ್ಗೇರಿಯಾದೊಂದಿಗೆ ಸ್ಪರ್ಧಿಸಿತ್ತು. ರಷ್ಯಾ ಕೇವಲ ಎರಡು ಮತಗಳ ಅಂತರದಲ್ಲಿ ಪರಾಭವಗೊಂಡಿತ್ತು. ಅಗತ್ಯವಾದ 114 ಮತಗಳನ್ನು ಗಳಿಸಿಲು ಮಾಸ್ಕೋಗೆ ಎರಡು ಮತಗಳ ಕೊರತೆ ಇತ್ತು. ಆ ಸಂಖ್ಯೆಯನ್ನು ಕ್ರೊವೆಷಿಯಾ (114) ಗಳಸಿದ್ದರೆ, ಹಂಗೇರಿ 144 ಮತಗಳೊಂದಿಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin