ಯುದ್ಧೋತ್ಸಾಹದಲ್ಲಿ ಟೈಗರ್ vs ಡ್ರ್ಯಾಗನ್

ಈ ಸುದ್ದಿಯನ್ನು ಶೇರ್ ಮಾಡಿ

India-vs-China

ಉಭಯ ರಾಷ್ಟ್ರಗಳ ನಡುವಿನ ಗಡಿರೇಖೆಯಲ್ಲಿ ಶಾಂತಿ ಕಾಪಾಡುವ ಒಪ್ಪಂದ ಮಾಡಿಕೊಂಡಿದ್ದರೂ ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಮ್ ಸರಹದ್ದು ವಿಚಾರದಲ್ಲಿ ಚೀನಾದ ಕ್ಯಾತೆಯಿಂದ ಯುದ್ಧದ ಕಾರ್ಮೋಡ ಕವಿದಿದೆ.   ಸಂಘರ್ಷ ಇದಕ್ಕೆ ಪ್ರಮುಖ ಕಾರಣವಾಗಿದ್ದು, 55 ವರ್ಷಗಳ ನಂತರ ಈ ವಿಚಾರದಲ್ಲಿ ನಡೆದ ಮಾತಿನ ಸಮರ ಯುದ್ಧಕ್ಕೂ ಸಜ್ಜಾಗುವ ಸನ್ನಿವೇಶ ಸೃಷ್ಟಿಸಿದೆ.   ಸಿಕ್ಕಿಂನ ಡೋಕ್ಲಮ್ ಪ್ರದೇಶದ ಮೇಲೆ ತಮ್ಮ ಹಕ್ಕಿದೆ ಎಂದು ಚೀನಾ ವಾದಿಸಿದರೆ, ಇತ್ತ ಭಾರತ ಆ ಪ್ರದೇಶ ತನಗೆ ಸೇರಿದ್ದು ಎಂದು ಹೇಳಿದೆ. ಹೀಗಾಗಿ ಇಲ್ಲಿಯವರೆಗೂ ಆಗೊಮ್ಮೆ -ಈಗೊಮ್ಮೆ ಸಣ್ಣದಾಗಿ ಭುಗಿಲೇಳುತ್ತಿದ್ದ ವಿವಾದ ತಾರಕಕ್ಕೇರಿ ಆತಂಕ ಸೃಷ್ಟಿಸಿದೆ.

ಇಂಥ ಸೂಕ್ಷ್ಮವಿಚಾರದಲ್ಲಿ ಎರಡೂ ದೇಶದ ನಾಯಕರು ದ್ವಿಪಕ್ಷೀಯ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದ್ದರೂ ಚೀನಾ ಮಾತ್ರ ಇಂತಹ ಸಂಧಾನಕ್ಕೆ ಮುಂದಾಗದೆ ಏಕಾಏಕಿ ಯುದ್ಧದ ಮಾತುಗಳನ್ನಾಡಿ ಉದ್ಧಟತನ ತೋರುತ್ತಿದೆ.  ಆದರೆ ಭಾರತದ ದೃಷ್ಟಿಯಿಂದ ನೋಡುವುದಾದರೆ ಈಗಾಗಲೇ ಒಂದು ಕಡೆ ಭಾರತ-ಪಾಕ್ ಗಡಿಭಾಗವಾದ ಕಾಶ್ಮೀರ ಉಗ್ರರ ಉಪಟಳ ಮಿತಿಮೀರಿ ಇದರ ನಿಯಂತ್ರಣಕ್ಕೆ ಎಲ್ಲಾ ರೀತಿಯಲ್ಲೂ ಕ್ರಮ ವಹಿಸುತ್ತಿದೆ. ಹೀಗಾಗಿ ನಿರಂತರ ಸಂಘರ್ಷ, ನುಸುಳುವಿಕೆ, ಭದ್ರತಾ ಪಡೆಗಳ ದಾಳಿ ಸೇರಿದಂತೆ ಇನ್ನಿತರ ಅಸಹನೀಯ ವಿದ್ಯಮಾನಗಳು ಸದಾ ಎಚ್ಚರಿಕೆಯಿಂದಿರುವಂತೆ ಮಾಡಿದೆ.

ಇಂತಹ ದಾಳಿಗಳಿಂದ ಭಾರತದ ಯೋಧರು, ಪೊಲೀಸರು, ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ. ಶಾಂತಿ, ಸೌಹಾರ್ದತೆಯ ಸಂದೇಶ ಸಾರುತ್ತಿರುವ ಜೊತೆಗೆ ಅದರಂತೆ ನಡೆಯಲು ಹೆಜ್ಜೆ ಇಟ್ಟಿರುವ ಭಾರತ ತನ್ನ ಮೇಲಿನ ದಾಳಿಗೂ ಧೃತಿಗೆಡದೆ ಉಗ್ರರ ದಮನಕ್ಕೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.  ಪಾಕ್‍ನ ನರಿಬುದ್ಧಿಯಿಂದ ಜಮ್ಮುಕಾಶ್ಮೀರದಲ್ಲಿ ಹೆಚ್ಚಿದ್ದ ಉಗ್ರರ ಉಪಟಳ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗಲೇ ಚೀನಾ, ಭಾರತದ ವಿರುದ್ಧ ತಗಾಧೆ ತೆಗೆದಿದೆ. ಪಾಕ್‍ನ ರೀತಿಯಲ್ಲಿ ಚೀನಾ ಕೂಡ ವರ್ತಿಸುತ್ತಿರುವುದು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ. ಇದನ್ನು ಕಂಡು ನೆರೆಯ ರಾಷ್ಟ್ರಗಳು ಒಳಗೊಳಗೆ ಕತ್ತಿಮಸೆಯುತ್ತಿವೆ.  ಸಿಕ್ಕಿಂ ಗಡಿಭಾಗದಲ್ಲಿರುವ ಡೊಕ್ಲಮ್ ಪ್ರದೇಶದಲ್ಲಿ ಚೀನಾ ಸೇನಾಪಡೆಗಳ ನಿಗಾ ಇಡಲು ಭಾರತ 2012ರಲ್ಲಿ ಎರಡು ಬಂಕರ್‍ಗಳನ್ನು ನಿರ್ಮಾಣ ಮಾಡಿತ್ತು. ಇದಕ್ಕೆ ಚೀನಾ ಭಾರೀ ವಿರೋಧ ವ್ಯಕ್ತಪಡಿಸಿ ಈ ಜಾಗದ ಮೇಲೆ ತಮ್ಮ ಹಕ್ಕು ಪ್ರತಿಷ್ಠಾಪಿಸಲು ಹೊರಟಿರುವುದು ಇಷ್ಟೆಲ್ಲ ಬೆಳವಣಿಗೆಗಳಿಗೆ ಕಾರಣ.

ಇಲ್ಲಿ ಸ್ಥಾಪಿಸಲಾಗಿದ್ದ ಬಂಕರ್‍ಗಳನ್ನು ತೆರವುಗೊಳಿಸುವಂತೆ ಭಾರತಕ್ಕೆ ತಾಕೀತು ಮಾಡಿ ಅಲ್ಲಿಂದ ಸಣ್ಣ ಕಿತಾಪತಿ ಆರಂಭಿಸಿದ್ದ ಚೀನಾ, ಜೂ.6ರಂದು ಎರಡು ಬುಲ್ಡೋಜರ್‍ಗಳಿಂದ ಏಕಾಏಕಿ ಭಾರತದ ಬಂಕರ್‍ಗಳನ್ನು ಸರ್ವನಾಶ ಮಾಡಿತ್ತು. ಇದಕ್ಕೆ ಭಾರತದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರಕ್ಕಾಗಿ ಉಭಯ ದೇಶಗಳ ನಾಯಕರ ನಡುವೆ ವಾಕ್ಸಮರ ನಡೆದು ಯುದ್ಧದ ಬೆದರಿಕೆವರೆಗೂ ಬಂದು ನಿಂತಿದೆ.   1962ರ ಯುದ್ಧದ ಇತಿಹಾಸದಿಂದ ಪಾಠ ಕಲಿಯಿರಿ ಎಂದು ಭಾರತಕ್ಕೆ ಪರೋಕ್ಷವಾಗಿ ತಾನು ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾ ರವಾನಿಸಿದೆ. ಇದರಿಂದ ಕೆರಳಿದ ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ 1962ರ ಭಾರತವೇ ಬೇರೆ, 2017ರ ಭಾರತವೇ ಬೇರೆ ಎಂದು ಗುಡುಗಿದ್ದಾರೆ.  ಇದಕ್ಕೆ ಹೌಹಾರಿದ ಚೀನಾ 1962ರ ಚೀನಾವೇ ಬೇರೆ, 2017ರ ಚೀನಾವೇ ಬೇರೆ ಎಂದು ಗರ್ಜಿಸಿರುವುದರಿಂದ ಸಿಕ್ಕಿಂ ಗಡಿಯಲ್ಲಿ ಉಭಯ ದೇಶಗಳ ಸಾವಿರಾರು ಸೈನಿಕರು ಜಮಾವಣೆಗೊಂಡು ಯುದ್ಧದ ವಾತಾವರಣ ಸೃಷ್ಟಿಯಾಗಿದೆ.

ಇತ್ತೀಚೆಗಷ್ಟೇ ಭಾರತದ ಪ್ರಧಾನಿ ನರೇಂದ್ರಮೋದಿ ಅವರು ಅಮೆರಿಕ ಪ್ರವಾಸದ ವೇಳೆ ಸಿಕ್ಕಿಂ ಗಡಿ ವಿಚಾರದಲ್ಲಿ ಚೀನಾ ಕಿತಾಪತಿ ಮಾಡುತ್ತಿರುವ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಇದು ಚೀನಾಗೆ ನುಂಗಲಾರದ ಬಿಸಿತುಪ್ಪವಾಗಿದೆ.   ಯಾವುದೇ ಯುದ್ಧವಿರಲಿ ಇದರಲ್ಲಿ ಪ್ರಮುಖವಾಗಿ ಸಂಕಷ್ಟಕ್ಕೆ ಸಿಲುಕುವವರು ಸಾವಿರಾರು ಸೈನಿಕರು, ಜೊತೆಗೆ ಭಾರತದ ಆರ್ಥಿಕ ವಲಯ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮೇಲೆ ಯುದ್ಧದ ಪರಿಣಾಮ ಬೀರಿ ಸಂಕಷ್ಟಕ್ಕೆ ಸಿಲುಕುವುದು ಸಹಜ. ಯುದ್ಧದ ಅನಾಹುತಗಳನ್ನು ಅರಿತಿರುವ ಭಾರತ ಇದಕ್ಕೂ ಎಂದಿಗೂ ಇಂಬು ನೀಡುವುದಿಲ್ಲ. ಆದರೂ ಚೀನಾದ ನಡೆಯಿಂದ ಯಾವ ರೀತಿಯ ಹೆಜ್ಜೆ ಇಡಬೇಕು ಎಂಬ ಬಗ್ಗೆ ಚಿಂತನ -ಮಂಥನ ನಡೆಯುತ್ತಿದ್ದು, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಆ ದೇಶದ ನಾಯಕರನ್ನು ಭಾರತಕ್ಕೆ ಆಹ್ವಾನಿಸಿ ಸಮಸ್ಯೆಯ ಮೂಲ ಅರಿತು ಇತ್ಯರ್ಥ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಡುವ ಹೆಜ್ಜೆ ಫಲಪ್ರದವಾಗಬೇಕಷ್ಟೆ.
ಇಂತಹ ಸೂಕ್ಷ್ಮ ವಿಚಾರದಲ್ಲಿ ಪ್ರಧಾನಿಯ ಮುಂದಿನ ನಡೆ ಏನು ಎಂಬುದು ಕಾದು ನೋಡಬೇಕು. ಒಂದು ವೇಳೆ ಯುದ್ದ ನಡೆದರೆ ದೇಶದ ಅಭಿವೃದ್ದಿಗೆ ಹೊಡೆತ ಬೀಳಲಿದೆ.

ಹಿನ್ನೆಲೆ:
1962ರಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಯುದ್ಧದಲ್ಲಿ ಡ್ರ್ಯಾಗನ್ ಮೇಲುಗೈ ಸಾಧಿಸಿತು. ಭಾರತ ಸೋಲು ಅನುಭವಿಸಿ ಭಾರೀ ಮುಖಭಂಗ ಅನುಭವಿಸಿತ್ತು. ಅದು ಇತಿಹಾಸ ಪುಟ ಸೇರಿತು. ಯುದ್ಧದ ಬಳಿಕ ಗಡಿ ರೇಖೆ ವಿಚಾರದಲ್ಲಿ ನಡೆದ ಮಿಲಿಟರಿ ಸಂಘರ್ಷಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಿತ್ತು. ಈ ಸಂಘರ್ಷದಲ್ಲಿ ಭಾರತ ಏಕೆ ಮೇಲುಗೈ ಸಾಧಿಸಿತು ಎಂಬ ವಿಚಾರಗಳ ಅವಲೋಕನೆ ಇಲ್ಲಿದೆ.  ನಾಥೂ ಲಾ(1967), ಚೋ ಲಾ(1967) ಹಾಗೂ ಶೀನೊ ಇಂಡಿಯನ್(1987) ಮಿಲಿಟರಿ ಸಂಘರ್ಷದಲ್ಲಿ ಭಾರತ ಚೀನಾಗೆ ಸರಿಯಾದ ಪಾಠ ಕಲಿಸಿದೆ. ಮೂರು ಮಿಲಿಟರಿ ಸಂಘರ್ಷಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಿದ್ದು, ಅದರ ಪೂರ್ಣ ಮಾಹಿತಿ.

1967ರ ನಾಥೂ ಲಾ ಸಂಘರ್ಷ:

ಭಾರತ ಹಾಗೂ ಚೀನಾ ನಡುವೆ 1962ರಲ್ಲಿ ಯುದ್ಧ ನಡೆದು 5 ವರ್ಷ ಬಳಿಕ ಗಡಿ ವಿವಾದ ಸಂಬಂಧಿಸಿದಂತೆ ಚೀನಾ ಮತ್ತೆ ಕ್ಯಾತೆ ತೆಗೆಯಿತು. 1967 ಸೆ.11ರಂದು ಈ ವಿಚಾರಕ್ಕಾಗಿ ನಾಥೂ ಲಾ ಗಡಿರೇಖೆಯಲ್ಲಿ ಉಭಯ ದೇಶಗಳ ನಡುವೆ ಸಂಷರ್ಘ ಏರ್ಪಟ್ಟು ಯುದ್ಧ ಕಾರ್ಮೋಡ ಕವಿದಿತ್ತು. ಚೈನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) 1967ರ ಸೆ.15ರಂದು ನಾಥೂ ಲಾದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿತ್ತು. ಈ ವೇಳೆ ಭಾರತ ಎದೆಗುಂದದೆ ಚೀನಾದ ಬಂಕರ್‍ಗಳನ್ನು ಧ್ವಂಸ ಮಾಡಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಅಪಾರ ಸಾವು-ನೋವು ಸಂಭವಿಸಿತು.

ನಂತರ ಚೀನಾ ಪಡೆಗಳು ಭಾರತದ ಗಡಿರೇಖೆಗಳಲ್ಲಿ ಕಂದಕ ಅಗೆಯಲು ಆರಂಭಿಸಿತು. ಇದನ್ನು ಪತ್ತೆ ಹಚ್ಚಿದ ಭಾರತ ಪಡೆಗಳು ಕೆಲಸ ನಿಲ್ಲಿಸುವಂತೆ ಚೀನಾಗೆ ಸೂಚನೆ ನೀಡಿತ್ತು. ಆದರೆ ಮಾತು ಕೇಳದ ಚೀನಾ ತನ್ನ ಕಾರ್ಯ ಮುಂದುವರೆಸಿತ್ತು. ಆಗ ಎಚ್ಚೆತ್ತುಕೊಂಡ ಭಾರತ ನಾಥೂ ಲಾ ದಲ್ಲಿ ತನಗೆ ಸೇರಿದ ಗಡಿ ರೇಖೆಗಳಲ್ಲಿ ತಂತಿ ಬೇಲಿ ಹಾಕಲು ನಿರ್ಧರಿಸಿತು.

ಭಾರತ ತನ್ನ ಪ್ರದೇಶದಲ್ಲಿ ಗಡಿರೇಖೆ ಹಾಕಿರುವುದಕ್ಕೆ ಆಗಸ್ಟ್ 18 ರಂದು ಚೀನಾ ಸಿಟ್ಟಾಯಿತು. 2 ದಿನ ಬಳಿಕ ಭಾರತ ಈ ಮೂಲಕ ಪ್ರಾಬಲ್ಯ ಸಾಧಿಸಿತು. ಬಳಿಕ ಚೀನಾ ಕಮಿಷನರ್ ಅವರು ಭಾರತ ಗಡಿರೇಖೆ ಪ್ರದೇಶಕ್ಕೆ ಬಂದು ಲೆಫ್ಟಿನೆಂಟ್ ಕರ್ನಲ್ ರೈ ಸಿಂಗ್ ಅವರ ಬಳಿ ತಂತಿ ಬೇಲಿ ಹಾಕುವುದನ್ನು ನಿಲ್ಲಿಸಬೇಕು ಎಂದು ಸೂಚನೆ ನೀಡಿದರು. ಭಾರತ ಇದನ್ನು ಸಾರಾಸಗಾಟವಾಗಿ ತಳ್ಳಿಹಾಕಿತ್ತು. ಇದರಿಂದ ತೀವ್ರ ಆಕ್ರೋಶಗೊಂಡ ಚೀನಾ, ಭಾರತದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಎರಡು ಪಡೆಗಳು ಭಾರೀ ಫೈರಿಂಗ್ ನಡೆಸಿದರು. ಪ್ರಾರಂಭದಲ್ಲಿ ಚೀನಾ ಮೇಲುಗೈ ಸಾಧಿಸಿತ್ತು. ತೀವ್ರ ಹತಾಶೆಗೊಳಗಾದ ಭಾರತ ಹೆಚ್ಚಿನ ಪಡೆಯನ್ನು ಕರೆಸಿಕೊಂಡು ಫಿರಂಗಿ, ಆಕ್ರಮಣಕಾರಿ ಶಸ್ತ್ರಾಸ್ತ್ರಗಳಿಂದ ಚೀನಾ ಬಂಕರ್‍ಗಳನ್ನು ಟಾರ್ಗೆಟ್ ಮಾಡಿ ಹಂತ ಹಂತವಾಗಿ ಧ್ವಂಸ ಮಾಡಿದ್ದವು. ಅಲ್ಲದೆ 1962ರ ಯುದ್ಧದಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಪುನಾರಾವರ್ತನೆಯಾಗಲು ಬಿಡಲ್ಲ ಎಂದು ಭಾರತ ಚೀನಾಗೆ ತಿಳಿಸಿತು. ಅಂತಿಮವಾಗಿ ನಾಥೂ ಲಾದಲ್ಲಿ ಭಾರತ ಜಯಭೇರಿ ಬಾರಿಸಿತು.

1967ರ ಚೋ ಲಾ ಸಂಘರ್ಷ :

ನಾಥೂ ಲಾ ಮಿಲಿಟರಿ ಸಂಘರ್ಷದಲ್ಲಿ ಹೀನಾಯ ಸೋಲು ಅನುಭವಿಸಿ ಭಾರೀ ಅವಮಾನಕ್ಕೀಡಾದ ಚೀನಾ 1967 ಅಕ್ಟೋಬರ್ 1 ರಂದು ಚೋ ಲಾ ಗಡಿ ವಿಚಾರ ಸಂಬಂಧಿಸಿದಂತೆ ಭಾರತ ಮೇಲೆ ದಾಳಿ ನಡೆಸಿತ್ತು. 7/11 ಜಿಆರ್ ಮತ್ತು 10 ಜಾಕ್ ಆರ್‍ಐಎಫ್ ಶಸ್ತ್ರಾಸ್ತ್ರಗಳೊಂದಿಗೆ ಚೀನಾ ಪಡೆಗಳು ಭಾರೀ ದಾಳಿ ಮಾಡಿದ್ದವು. ಅ.10 ರಂದು ಚೀನಾ ತನ್ನ ದಾಳಿ ಹಿಂಪಡೆದುಕೊಂಡಿತು. ಅನಾವ್ಯಶಕವಾಗಿ ಚೀನಾ ದಾಳಿ ಮಾಡುತ್ತಿರುವ ಬಗ್ಗೆ ಭಾರತ ಜಾಗತಿಕ ಸಮುದಾಯದ ಸಭೆಯಲ್ಲಿ ತಿಳಿಸಿತು. ಈ ಮೂಲಕ ಅಂತಿಮವಾಗಿ ಭಾರತ ಚೋ ಲಾ ಸಂಘರ್ಷದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿತು.

1987ರ ಶೀನೊ-ಇಂಡಿಯನ್ ಸಂಘರ್ಷ:

ಅರುಣಾಚಲಪ್ರದೇಶ ಗಡಿ ಬಿಕ್ಕಟ್ಟು ವಿಚಾರಕ್ಕಾಗಿ 1987ರಲ್ಲಿ ಭಾರತ-ಚೀನಾ ನಡುವೆ ಯುದ್ಧದ ಕಾರ್ಮೋಡ ಉಂಟಾಯಿತು. ಈ ಸಂದರ್ಭದಲ್ಲಿ ಭಾರತ ರಾಜತಾಂತ್ರಿಕ ಮೂಲಕ ಸಮಸ್ಯೆ ಬಗೆಹಿರಿಸಲುಕೊಳ್ಳಲು ಸಿದ್ಧವಾಗಿದೆ ಎಂದು ಚೀನಾಗೆ ತಿಳಿಸಿ ಅಂದಿನ ವಿದೇಶಾಂಗ ಸಚಿವ ಎನ್.ಡಿ. ತಿವಾರಿ 1987ರ ಮೇನಲ್ಲಿ ಬೀಜಿಂಗ್‍ಗೆ ತೆರಳಿ ನಾಯಕರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದರು. ಆಗಲೇ ಶುಮ್‍ರುರಾಂಗ್ ಚೌ ಪ್ರದೇಶದಲ್ಲಿ ಎರಡು ದೇಶದ ಯೋಧರು ಯುದ್ಧಕ್ಕೆ ಸಿದ್ಧರಾಗಿದ್ದರು. ಬೀಜಿಂಗ್‍ನಲ್ಲಿ ಈ ಸಮಸ್ಯೆ ಬಗೆಹರಿದ ಕೂಡಲೇ ಹಿಂದಕ್ಕೆ ಸರಿದವು. ಅಂತಿಮವಾಗಿ 1993ರಲ್ಲಿ ಭಾರತಚೀನಾ ವಾಸ್ತವ ಗಡಿರೇಖೆಯಲ್ಲಿ ಶಾಂತಿ ಕಾಪಾಡುವಂತೆ ಒಪ್ಪಂದಕ್ಕೆ ಸಹಿ ಹಾಕಿದ್ದವು. 30 ವರ್ಷಗಳ ಬಳಿಕ ಇದೀಗ ಚೀನಾ ಮತ್ತೆ ಸಿಕ್ಕಿಂನ ಡೋಕ್ಲಮಾ ಗಡಿ ವಿಚಾರಕ್ಕೆ ಕ್ಯಾತೆ ತೆಗೆದಿದೆ.
ಇದನ್ನು ಮುಂದುವರೆಸಿರುವ ಚೀನಾ ಭಾರತದ ಸಂಶೋಧಕರಿಗೆ ವೀಸಾ ನೀಡಲು ನಿರಾಕರಿಸಿರುವುದು ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳಲು ಕಾರಣವಾಗಿದೆ. ಹಠಮಾರಿ ಚೀನಾ ಸಂಧಾನಕ್ಕೆ ಮುಂದಾಗುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.\

ಭಾರತದ ನಡೆ ಏನು:

ವಿಶ್ವದಲ್ಲೇ ಭಾರತ ಶಾಂತಿಪ್ರಿಯ ದೇಶ. ಆದರೆ ಗಡಿ ವಿಚಾರದಲ್ಲಿ ಉದ್ಭವಿಸಿದ ಕೆಲವೊಂದು ಸಂಘರ್ಷಗಳಲ್ಲಿ ಈ ಹಿಂದೆ ಭಾರತ ಅಕ್ಕಪಕ್ಕದ ರಾಷ್ಟ್ರಗಳ ಮೇಲೆ ಯುದ್ಧ ಮಾಡಿತ್ತು. ಇದಕ್ಕೆ ಮತ್ತೆ ಆಸ್ಪದ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin