ಯುದ್ಧ ಸಂತ್ರಸ್ತ, ನಿರಾಶ್ರಿತ ಮಕ್ಕಳ ಬಗ್ಗೆ ಅನುಕಂಪವಿರಲಿ : ವಿಶ್ವ ಸಮುದಾಯಕ್ಕೆ ಪೋಪ್ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Pope-01

ವ್ಯಾಟಿಕನ್ ಸಿಟಿ, ಡಿ. 25-ಯದ್ಧ ಸಂತ್ರಸ್ತ, ವಲಸೆ ಬಂದ ಮತ್ತು ನಿರಾಶ್ರಿತ ಮಕ್ಕಳ ಬಗ್ಗೆ ಸಹಾನುಭೂತಿ ಮತ್ತು ಅನುಕಂಪವಿರಲಿ ಎಂದು 1.2 ಶತಕೋಟಿ ಕ್ರೈಸ್ತರಿಗೆ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ಫ್ರಾನ್ಸಿಸ್ ಕರೆ ನೀಡಿದ್ದಾರೆ.  ರೋಮ್‍ನ ಪವಿತ್ರನಗರಿ ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಸ್ಕ್ವೇರ್‍ನಲ್ಲಿ ನಿನ್ನೆ ಮಧ್ಯರಾತ್ರಿ 10,000ಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡ ಸಮಾರಂಭದಲ್ಲಿ ಪೋಪ್ಕ್ರಿಸ್ಮಸ್ ಸಂದೇಶ ಸಾರಿದರು. ಸಿರಿಯಾದಲ್ಲಿ ಭಯೋತ್ಪಾದಕರ ದಾಳಿ ಮತ್ತು ಅವರ ವಿರುದ್ಧ ನಡೆಯುತ್ತಿರುವ ಯುದ್ಧದಿಂದ ಅಲ್ಲಿನ ಮಕ್ಕಳು ಅನುಭವಿಸುವತ್ತಿರುವ ಕಷ್ಟ-ಕಾರ್ಪಣ್ಯಗಳನ್ನು ಅವರು ಉಲ್ಲೇಖಿಸಿದರು.

ವಿಶ್ವದ ಅನೇಕ ದೇಶಗಳಲ್ಲಿ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಶಿಶುಗಳು ಚಲಿಸದಂತೆ ಕಟ್ಟಿ ಹಾಕುವ ರೀತಿಯಲ್ಲಿ ಮಕ್ಕಳ ಸ್ವಾತಂತ್ರವನ್ನು ಕಸಿದುಕೊಳ್ಳಲಾಗಿದೆ. ಸಿರಿಯಾದಲ್ಲಿ ಬಾಂಬ್ ದಾಳಿಗಳಿಗೆ ಹೆದರಿ ಪುಟ್ಟ ಮಕ್ಕಳು ಅಡಗಿ ಕುಳಿತಿದ್ದಾರೆ, ಇನ್ನೊಂದೆಡೆ ಮೆಡಿಟರೆನಿಯನ್ ಸಮುದ್ರದಲ್ಲಿ ಕಿಕ್ಕಿರಿದ ಅಕ್ರಮ ವಲಸಿಗರ ದುರ್ದೈವ ನೌಕೆಗಳ ಅಡಿಯಲ್ಲಿ ಅವಿತಿದ್ದಾರೆ. ಮತ್ತೊಂದೆಡೆ ಆಟಿಕೆಗಳು ಇರಬೇಕಾದ ಕೈಗಳಲ್ಲಿ ಶಸ್ತ್ರಾಸ್ತ್ರಗಳಿವೆ ಎಂದು ಪೋಪ್ಮರುಕ ವ್ಯಕ್ತಪಡಿಸಿದರು. ಇಂಥ ಮಕ್ಕಳು ಬದುಕಲು ಅವಕಾಶ ನೀಡುವ ವಾತಾವರಣ ಸೃಷ್ಟಿಯಾಗಬೇಕು. ಇದು ಎಲ್ಲರ ಹೊಣೆಗಾರಿಕೆ. ಇದಕ್ಕಾಗಿ ವಿಶ್ವ ಸಮುದಾಯ ಸಹನಾಭೂತಿಯಿಂದ ಮಕ್ಕಳ ಕಲ್ಯಾಣಕ್ಕೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin