ಯುಪಿಎಸ್‍ಸಿ ನೂತನ ಅಧ್ಯಕ್ಷೆಯಾಗಿ ಅಲ್ಕಾ ಶಿರೋಹಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

UPSC

ನವದೆಹಲಿ, ಸೆ.18- ಕೇಂದ್ರ ಲೋಕಸೇವಾ ಆಯೋಜಗದ (ಯುಪಿಎಸ್‍ಸಿ) ಅಧ್ಯಕ್ಷರಾಗಿ ಮಾಜಿ ಐಎಎಸ್ ಅಧಿಕಾರಿ ಅಲ್ಕಾ ಶಿರೋಹಿ ಅವರನ್ನು ನೇಮಕ ಮಾಡಲಾಗಿದೆ. ಯುಪಿಎಸ್‍ಸಿ ಅಧ್ಯಕ್ಷರಾಗಿರುವ ದೀಪಕ್ ಗುಪ್ತಾ ಮಂಗಳವಾರ ನಿವೃತ್ತರಾಗಲಿದ್ದು, ಆ ಹುದ್ದೆಗೆ ಆಲ್ಕಾ ಶಿರೋಹಿ ನೇಮಕಗೊಂಡಿದ್ದಾರೆ.  ಸೆ.21ರಿಂದ ಜಾರಿಗೆ ಬರುವಂತೆ ಯುಪಿಎಸ್‍ಸಿ ಅಧ್ಯಕ್ಷರ ಹುದ್ದೆಗೆ ಶಿರೋಹಿ ಅವರನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ನೇಮಕ ಮಾಡಿದ್ದಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶವೊಂದರಲ್ಲಿ ತಿಳಿಸಲಾಗಿದೆ. ಅಲ್ಕಾ ಶಿರೋಹಿ ಅವರ ಪ್ರಸ್ತುತ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಅಧ್ಯಕ್ಷ ಹುದ್ದೆಗೆ ಏರಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin