ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

UPSC

ನವದೆಹಲಿ, ಸೆ.17-ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ನಡೆಸಿದ ಸಿವಿಲ್ ಸರ್ವಿಸಸ್ ಪೂರ್ವಭಾವಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ.  ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಮತ್ತಿತ್ತರ ಹುದ್ದೆಗಳಿಗೆ ಆಯ್ಕೆ ಮಾಡಲು ಆಗಸ್ಟ್ 7ರಂದು ರಾಷ್ಟ್ರಾದ್ಯಂತ ನಡೆದ ಪರೀಕ್ಷೆಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಈ ಎರಡು ಹಂತಗಳಲ್ಲಿ ಪಾಸಾಗಬೇಕಾಗುತ್ತದೆ. ಅರ್ಹ ಅಭ್ಯರ್ಥಿಗಳು ಸವಿವರ ಆನ್‍ಲೈನ್ ಪರೀಕ್ಷೆ ಅರ್ಜಿ ಭರ್ತಿ ಮಾಡುವುದಕ್ಕೂ ಮುನ್ನ ವೆಬ್‍ಸೈಟ್‍ನಲ್ಲಿ ಸೂಚಿಸಿರುವ ಪುಟದಲ್ಲಿ ತಮ್ಮ ಹೆಸರುಗಳನ್ನು ಮೊದಲು ನೋಂದಾಯಿಸಿಕೊಳ್ಳಬೇಕೆಂದು ಯುಪಿಎಸ್‍ಸಿ ತಿಳಿಸಿದೆ.

ಮುಖ್ಯ ಪರೀಕ್ಷೆ ಆರಂಭಕ್ಕೆ ಎರಡು ವಾರಗಳ ಮುನ್ನ ಅರ್ಹ ಅಭ್ಯರ್ಥಿಗಳಿಗೆ ಆಯೋಗದ ವೆಬ್‍ಸೈಟ್ ತಿತಿತಿ.uಠಿಛಿ.gov.ಟಿ   ಇಲ್ಲಿ ಪರೀಕ್ಷೆಯ ವೇಳಾಪಟ್ಟಿಯೊಂದಿಗೆ ಇ-ಪ್ರವೇಶ ಪತ್ರವನ್ನು ಸಹ ಅಪ್‍ಲೋಡ್ ಮಾಡಲಾಗುವುದು. ಲೋಕಸೇವೆಗಳ ಮುಖ್ಯ ಪರೀಕ್ಷೆಗಾಗಿ ಅಕ್ಟೋಬರ್ 7 ರಿಂದ 20ರವರೆಗೆ ಸಂಜೆ 6 ಗಂಟೆ ತನಕ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಸವಿವರ ಅರ್ಜಿ ನಮೂನೆಯನ್ನು ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಭರ್ತಿ ಮಾಡಬೇಕು. ಅಭ್ಯರ್ಥಿಗಳು ಫಲಿತಾಂಶ ಮತ್ತಿತ್ತರ ಮಾಹಿತಿಯನ್ನು 011-23385271, 011-23098543 ಅಥವಾ 011-23381125  ಈ ಸಂಖ್ಯೆಯ ದೂರವಾಣಿಯಿಂದ ಪಡೆಯಬಹುದು. ಅಲ್ಲದೇ ಯುಪಿಎಸ್‍ಸಿ ವೆಬ್‍ಸೈಟ್‍ನಲ್ಲೂ ಇದು ಲಭ್ಯವಿರುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin