ಯುಪಿ, ಪಂಜಾಬ್’ನಲ್ಲಿ 83 ಕೋಟಿ ರೂ. ನಗದು, ಭಾರೀ ಪ್ರಮಾಣದ ಮದ್ಯ, ಡ್ರಗ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Election-Efect

ನವದೆಹಲಿ, ಜ.23- ಚುನಾವಣೆಯ ಹೊಸ್ತಿಲಿನಲ್ಲಿರುವ ಪಂಚರಾಜ್ಯಗಳಲ್ಲಿ ಭಾರೀ ಅಕ್ರಮ-ಅವ್ಯವಹಾರಗಳು ಬೆಳಕಿಗೆ ಬರುತ್ತಿದ್ದು, ವಿಶೇಷ ದಳದ ಅಧಿಕಾರಿಗಳು ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೆಲವರನ್ನು ಬಂಧಿಸಿ 83 ಕೋಟಿ ರೂ. ನಗದು, 12.65 ರೂ. ಮೌಲ್ಯದ ಮದ್ಯ ಹಾಗೂ 10.30 ಕೋಟಿ ರೂ. ಮೊತ್ತದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವಾರ ಈ ಎರಡು ರಾಜ್ಯಗಳಿಂದ 62 ಕೋಟಿ ರೂ. ನಗದು ಮತ್ತು ಮಾದವ ವಸ್ತುಗಳನ್ನು ಸಹ ಜಪ್ತಿ ಮಾಡಲಾಗಿತ್ತು.  ಚುನಾವಣೆ ಸಂದರ್ಭದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಚುನಾವಣಾ ಆಯೋಗದಿಂದ ನೇಮಿಸಲಾಗಿದ್ದ ಕಣ್ಗಾವಲು ಮತ್ತು ವೆಚ್ಚ ಉಸ್ತುವಾರಿ ತಂಡಗಳು ಐದು ರಾಜ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ಭಾರೀ ಅಕ್ರಮಗಳು ಪತ್ತೆಯಾಗುತ್ತಿವೆ.

ಮತದಾನಕ್ಕೆ ದಿನಾಂಕ ಘೋಷಣೆಯಾದ ನಂತರ ಜ.22ರವರೆಗೆ ವಶಪಡಿಸಿಕೊಳ್ಳಲಾದ ನಗದು, ಮದ್ಯ ಮತ್ತು ಮಾದಕ ವಸ್ತುಗಳ ಅಂಕಿ ಅಂಶಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಗರಿಷ್ಠ ಪ್ರಮಾಣದ 79.13 ಕೋಟಿ ರೂ (31.65 ಲಕ್ಷ ರೂ. ಹಳೆ ನೋಟುಗಳು) ವಶಪಡಿಸಿಕೊಳ್ಳಲಾಗಿದೆ. ನಂತರದ ಸ್ಥಾನಗಳಲ್ಲಿ ಪಂಜಾಬ್ (4.05 ಕೋಟಿ ರೂ.), ಉತ್ತರಾಖಂಡ್ (33.27 ಲಕ್ಷ ರೂ.) ಹಾಗೂ ಮಣಿಪುರ (6.95 ಲಕ್ಷ ರೂ.) ರಾಜ್ಯಗಳಿವೆ.

ನಗದು ಹಣವಲ್ಲದೇ ಮತದಾರರಿಗೆ ಆಮಿಷವೊಡ್ಡಲು ಬಳಸಲು ಉದ್ದೇಶಿಸಿದ್ದ ಭಾರೀ ಪ್ರಮಾಣದ ಮದ್ಯವನ್ನು ಸಹ ಜಪ್ತಿ ಮಾಡಲಾಗಿದೆ. ಈ ರಾಜ್ಯಗಳು ಚುನಾವಣಾ ಆಯೋಗ ನಿಯೋಜಿತ ಅಧಿಕಾರಿಗಳು, ಪೊಲೀಸರು ಮತ್ತು ಅಬಕಾರಿ ತಂಡದ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 12.65 ಕೋಟಿ ರೂ. ಮೌಲ್ಯದ 7.36 ಲಕ್ಷ ಲೀಟರ್ ಮದ್ಯ ಹಾಗೂ 500 ಬಾಟಲ್ ಕೇನ್ ಬಿಯರ್‍ನನ್ನು ವಶಪಡಿಸಿಕೊಂಡಿದ್ದಾರೆ.

ಪಂಜಾಬ್‍ನ ವಿವಿಧೆಡೆ ದಾಳಿ ನಡೆಸಿದ ಮಾದಕ ವಸ್ತು ನಿಗ್ರಹ ದಳದ ಸಿಬ್ಬಂದಿ, 10.30 ಕೋಟಿ ರೂ. ಮೌಲ್ಯ 1,485 ಕೆ.ಜಿ ಡ್ರಗ್ಸ್‍ಗಳನ್ನು ಸೀಜ್ ಮಾಡಿದ್ದಾರೆ. ಉತ್ತರಪ್ರದೇಶ, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲೂ ಮಾದಕ ವಸ್ತುಗಳ ದಂಧೆಗಳು ಪತ್ತೆಯಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin