ಯುಪಿ, ರಾಜಸ್ತಾನದಲ್ಲಿ ಮುಂದುವರಿದ ಧೂಳು ಬಿರುಗಾಳಿ, ಮಳೆ : ಮೃತರ ಸಂಖ್ಯೆ 140ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Dust--02
ಜೈಪುರ್, ಮೇ 3-ಉತ್ತರಪ್ರದೇಶ, ರಾಜಸ್ತಾನ ಮತ್ತು ಪಂಜಾಬ್ ರಾಜ್ಯಗಳಲ್ಲಿ ಧೂಳು, ಬಿರುಗಾಳಿ ಮತ್ತು ಭಾರೀ ಮಳೆಯಿಂದ ಸತ್ತವರ ಸಂಖ್ಯೆ ಇಂದು 140ಕ್ಕೇರಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಮೊನ್ನೆ ರಾತ್ರಿಯಿಂದ ಈ ಮೂರು ರಾಜ್ಯಗಳಲ್ಲಿ ಪ್ರಕೃತಿಯ ರೌದ್ರಾವತಾರದಿಂದ ಜನರು ಚೇತರಿಸಿಕೊಳ್ಳುತ್ತಿರುವಾಗಲೇ ಧೂಳಿನಿಂದ ಕೂಡಿದ ಭಾರೀ ಬಿರುಗಾಳಿ ಮತ್ತು ಮಳೆ ಇಂದು ಸಹ ಮುಂದುವರಿಯಿತು.

ಉತ್ತರ ಪ್ರದೇಶದ 10 ಜಿಲ್ಲೆಗಳು, ರಾಜಸ್ತಾನಲ್ಲಿ ಮುಖ್ಯವಾಗಿ ಮತಿಸ್ಯ ಪ್ರಾಂತದಲ್ಲಿ ಪ್ರಕೃತಿ ವಿಕೋಪದಿಂದ ಅಲ್ಲೋಲಕಲ್ಲೋಲವಾಗಿದೆ ಭಾರೀ ರಭಸದ ಮರಳು ಬಿರುಗಾಳಿ ಮತ್ತು ಅದರ ಹಿಂದೆಯೇ ಸುರಿದ ಬಿರುಮಳೆಯಿಂದಾಗಿ ಹಲವು ಮನೆಗಳು ಕುಸಿದಿದ್ದು, ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ  ಈ ಮೂರು ರಾಜ್ಯಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಸಾಗಿವೆ.

Facebook Comments

Sri Raghav

Admin