ಯುಪಿ ಸರ್ಕಾರದಿಂದ ಮಾಜಿ ಸಿಎಂಗಳಿಗೆ ಶಾಕ್ : ಬಂಗಲೆ ತೊರೆಯುವಂತೆ ನೋಟಿಸ್..!

ಈ ಸುದ್ದಿಯನ್ನು ಶೇರ್ ಮಾಡಿ

bungalows
ಲಕ್ನೋ, ಮೇ 18-ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿ ಇನ್ನು 15 ದಿನಗಳಲ್ಲಿ ಅಧಿಕೃತ ಬಂಗಲೆಗಳನ್ನು ತೆರವುಗೊಳಿಸುವಂತೆ ಉತ್ತರ ಪ್ರದೇಶದ ಆರು ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರ ನೋಟಿಸ್ ಜಾರಿಗೊಳಿಸಿದೆ. ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್, ಅವರ ಪುತ್ರ ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಮುಖ್ಯಸ್ಥೆ ಮಾಯಾವತಿ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಎನ್.ಡಿ. ತಿವಾರಿ, ಹಾಗೂ ಕಲ್ಯಾಣ್ ಸಿಂಗ್ (ನಿಧನರಾಗಿದ್ದಾರೆ) ಈ ಆರು ಮಾಜಿ ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡಿಸಲು ನೋಟಿಸ್ ಜಾರಿಗೊಳಿಸಲಾಗಿದೆ.
ಮುಖ್ಯಮಂತಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ವಸತಿ ಇಲಾಖೆಯಿಂದ ಈ ಸಂಬಂಧ ನೋಟಿಸ್‍ಗಳನ್ನು ನೀಡಲಾಗಿದೆ.

ಈ ಸಂಬಂಧ ಮೂರು ದಿನಗಳ ಹಿಂದಷ್ಟೇ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ ಬಂಗಲೆ ತೆರವುಗೊಳಿಸಲು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಿದ್ದರು. ಇದರ ಹಿಂದೆಯೇ ಮುಲಾಯಂ ಸೇರಿದಂತೆ ಆರು ಮಾಜಿ ಸಿಎಂಗಳಿಗೆ ನೋಟಿಸ್‍ಗಳು ಜಾರಿಯಾಗಿವೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳದ ಕೂಡಲೇ ಆತ/ಆಕೆ ಸಾಮಾನ್ಯ ಪ್ರಜೆ. ಹೀಗಾಗಿ ಸರ್ಕಾರದ ಬಂಗಲೆಗಳನ್ನು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಗಳು ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.

Facebook Comments

Sri Raghav

Admin