ಯುಪಿ ಸಿಎಂ ಪಟ್ಟಕ್ಕೇರಿದ ಸನ್ಯಾಸಿ ಯೋಗಿ ಆದಿತ್ಯನಾಥ, ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Yogi--01

ಬೆಂಗಳೂರು, ಮಾ.19-ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯೋಗಿ ಆದಿತ್ಯನಾಥಗೂ ಮಂಗಳೂರಿನ ಕದ್ರಿಯ ಯೋಗೇಶ್ವರ ಮಠಕ್ಕೂ ಅವಿನಾಭಾವ ಸಂಬಂಧ.   ಕಳೆದ ವರ್ಷವಷ್ಟೇ ಕದ್ರಿಯ ಈ ಮಠಕ್ಕೆ ಯೋಗಿ ಆದಿತ್ಯನಾಥ ಗುರೂಜಿ ಭೇಟಿ ನೀಡಿದ್ದರು. ಯೋಗೀಶ್ವರ ಮಠದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು ನಾಥ ಪರಂಪರೆಯ ಆ ಮಠಕ್ಕೆ ಮಹಾರಾಜರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗೋರಕ್‍ನಾಥ್‍ಪುರ ಸೇರಿದಂತೆ ಹಲವು ನಾಥ ಪರಂಪರೆಯ ಮಠಗಳಿಗೆ ಯೋಗಿ ಆದಿತ್ಯನಾಥರೇ ಮುಖ್ಯ ಗುರುವಾಗಿದ್ದಾರೆ. ಮಂಗಳೂರಿನ ಕದ್ರಿಯ ಯೋಗೀಶ್ವರ ಮಠಕ್ಕೂ ಇವರೇ ಪ್ರಮುಖವಾಗಿರುವುದರಿಂದ ಕಳೆದ ಸಾಲಿನಲ್ಲಷ್ಟೇ ಇಲ್ಲಿಗೆ ಆಗಮಿಸಿ ಈ ಮಠಕ್ಕೆ ಗುರುಗಳನ್ನು ನೇಮಿಸಿದ್ದರು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಧಿಕಾರದ ಚುಕ್ಕಾಣಿ ಯೋಗಿ ಆದಿತ್ಯನಾಥರ ಕೈಗೆ ಸಿಗುತ್ತಿದ್ದಂತೆ ಕದ್ರಿಯ ಯೋಗೀಶ್ವರ ಮಠದ ಗುರುಗಳು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin