ಯುಪಿ ಸಿಎಂ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಮಹಿಳೆಯ ಬಂಧನಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Yogi--01

ಮೈಸೂರು, ಮಾ.21- ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಬೆಂಗಳೂರಿನಲ್ಲಿ ಪ್ರಭಾಬೆಳವಂಗಲ ಅವರು ಮಾಡಿರುವ ಪೋಸ್ಟ್ ಖಂಡನಾರ್ಹ. ತಕ್ಷಣ ಆಕೆಯನ್ನು ಬಂಧಿಸಬೇಕೆಂದು ಸಂಸದ ಪ್ರತಾಪ್‍ಸಿಂಹ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಭಾ ಅವರು ಆದಿತ್ಯನಾಥ್ ಓರ್ವ ಸನ್ಯಾಸಿನಿಯೊಂದಿಗಿರುವ ಅವಹೇಳನಕಾರಿ ವೀಡಿಯೋ ಪೋಸ್ಟ್ ಮಾಡಿರುವುದು ಖಂಡನಾರ್ಹ. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಚಾರಿತ್ರ್ಯವಧೆ, ಸಮಾಜದ ಶಾಂತಿ ಕದಡುವ ಯತ್ನ ಮತ್ತು ಪೋಟೋ ಮಾರ್ಪಡಿರುವ ಆರೋಪದಡಿ ದೂರು ದಾಖಲಿಸಲಾಗುವುದು ಎಂದು ಹೇಳಿದರು.

ತಮ್ಮ ಹಾಗೂ ತಮ್ಮವರ ವಿರುದ್ಧ ಯಾರಾದರೂ ಮಾತನಾಡಿದರೆ ಅಂತಹವರನ್ನು ಜೈಲಿಗೆ ಕಳುಹಿಸುವ ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಜನ ಬೆಂಬಲದಿಂದ ಆರಿಸಿಬಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಆದಿತ್ಯನಾಥ್ ವಿರುದ್ಧ ಮಹಿಳೆ ಅವಹೇಳನಕಾರಿ ಪೋಸ್ಟ್ ಮಾಡಿರುವುದರಿಂದ ಆಕೆಯನ್ನು ಬಂಧಿಸಬೇಕು. ಒಂದು ವೇಳೆ ಆಕೆಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೇರೆ ರಾಜ್ಯಗಳಲ್ಲೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಮಹಿಳಾಪರ ಸಂಘಟನೆಗಳಿಗೆ ನಿಜವಾದ ಸಂವೇದನೆ ಇದ್ದರೆ ಮೊದಲು ವಿಡಿಯೋದಲ್ಲಿರುವ ಮಹಿಳೆ ಪರ ಧ್ವನಿ ಎತ್ತಲಿ ಎಂದು ಆಗ್ರಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin