ಯುವಕನಲ್ಲಿ ಗರ್ಭಕೋಶ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Uteras--0

ಕೋಲಾರ, ಮಾ.23– ಪ್ರತಿ ನಿತ್ಯ ಪ್ರಪಂಚದಲ್ಲಿ ಒಂದಲ್ಲ ಒಂದು ವೈಶಿಷ್ಟ್ಯ, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸೂಕ್ತ ಉದಾಹರಣೆ ಎಂಬಂತೆ ಯುವಕನೊಬ್ಬನ ಶಸ್ತ್ರ ಚಿಕಿತ್ಸೆಗೆ ಮುಂದಾದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು.  ಏನಿದು ಅಚ್ಚರಿ ಅಂತೀರಾ… ಯುವಕನಲ್ಲಿ ಗರ್ಭಕೋಶ ಇದೆ ಎಂದರೆ ನೀವು ನಂಬಲ್ಲ. ಖಂಡಿತಾ ನಂಬ್ಲೇಬೇಕು. ಇಂಥದೊಂದು ಪ್ರಸಂಗ ಕೋಲಾರ ಗಡಿಗೆ ಹೊಂದಿಕೊಂಡಿರುವ ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ವಿ.ಕೋಟಾ ಮೂಲದ ಮುರುಗಂ ದೊಡ್ಡಿ ಗ್ರಾಮದ ನಿವಾಸಿ ಮುರುಗೇಶ್ ಎಂಬುವನಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಈತ ಖಾಸಗಿ ಆಸ್ಪತ್ರೆಗೆ ದಾಖಲಾದ. ಈತನನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದು, ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡರು. ಶಸ್ತ್ರಚಿಕಿತ್ಸೆಗೆ ಮುಂದಾಗಿ ಗರ್ಭಕೋಶ ಪತ್ತೆಯಾಗಿದೆ.  ಇದನ್ನು ನೋಡಿ ದಂಗಾದ ವೈದ್ಯರು ಇಂತಹ ಒಂದು 10 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಶಸ್ತ್ರಚಿಕಿತ್ಸೆಯ ನಂತರ ಯುವಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Facebook Comments

Sri Raghav

Admin