ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಬೇಡ : ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

fgADG

ಶ್ರೀನಗರ, ಆ.25-ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡಬೇಡಿ ಎಂದು ಕಾಶ್ಮೀರ ಜನತೆ ಮನವಿಮಾಡಿರುವ ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್, ಕಣಿವೆಯಲ್ಲಿ ಶಾಂತಿ ನೆಲೆಸುವಂತಾಗಲು ಸರ್ವಪಕ್ಷ ನಿಯೋಗವನ್ನು ಕರೆತರುವುದಾಗಿ ಹೇಳಿದ್ದಾರೆ.  ಕಾಶ್ಮೀರ ಪ್ರವಾದಲ್ಲಿರುವ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ರಾಜಧಾನಿ ಶ್ರೀನಗರದಲ್ಲಿ ಭೇಟಿ ಮಾಡಿ, ಕಣವೆಯಲ್ಲಿ ತಲೆದೋರಿರುವ ವಾಸ್ತವ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಸಹಜ ಸ್ಥಿತಿ ಹಿಂದಿರುಗುವಂತಾಗಲು ಕೇಂದ್ರ ಸರ್ಕಾರ ಅಗತ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ಇಲ್ಲಿಗೆ ಸರ್ವಪಕ್ಷ ನಿಯೋಗ ಕರೆತರಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮೆಹಬೂಬಾ ಮುಫ್ತಿ ಅವರಿಗೆ ತಾವು ತಿಳಿಸಿರುವುದಾಗಿ ಹೇಳಿದರು.

ಪರಿಸ್ಥಿತಿ ನಮಗೆ ಅರ್ಥವಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಮಾಗಪಾಯಗಳನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು. ನಿನ್ನೆ ವಿವಿಧ ಹಿನ್ನೆಲೆಯ 300ಕ್ಕೂ ಹೆಚ್ಚು ಮಂದಿ ತಮ್ಮನ್ನು ಭೇಟಿ ಮಾಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಸಿದ್ದಾರೆ. ಮಕ್ಕಳು ಮಕ್ಕಳಂತೆ ಇರಬೇಕು. ಅವರು ಕಲ್ಲನ್ನು ಎತ್ತಿಕೊಂಡಾಗ ಅವರಿಗೆ ತಿಳಿಹೇಳಬೇಕು ಎಂದು ಕಾಶ್ಮೀರದ ಪರಿಸ್ಥಿತಿಯನ್ನು ಉಲ್ಲೇಖಿಸಿ ಮಾತನಾಡಿದರು.  ಹಿಂಸಾಚಾರದಲ್ಲಿ ಅನೇಕ ಯೋಧರು ಹತರಾಗಿದ್ದು, 4000 ಸಿಬ್ಬಂದಿ ಗಾಯಗೊಂಡಿದ್ದಾರೆ. ಕಾಶ್ಮೀರ ಪ್ರವಾಹದ ವೇಳೆ ಯೋಧರು ವಹಿಸಿದ ಪಾತ್ರವನ್ನು ಇಲ್ಲಿನ ಜನರು ಮರೆಯಬಾರದು ಎಂದು ಸಿಂಗ್ ಕಿವಿಮಾತು ಹೇಳಿದರು. ಗರಿಷ್ಠ ಸಂಯಮ ಕಾಯ್ದುಕೊಳ್ಳುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ. ಪೆಲ್ಲೆಟ್ ಬಂದೂಕುಗಳಿಗೆ ಪರ್ಯಾಯವಾದ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಅವರು ತಿಳಿಸಿದರು.

ಮೆಹಬೂಬಾ ಮುಫ್ತಿ ಮಾತನಾಡಿ, ಕಲ್ಲು ತೂರಾಟ ನಡೆಸುವುದರಿಂದ ಅಥವಾ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುವುದರಿಂದ ಪರಿಹಾರ ಲಭಿಸುವುದಿಲ್ಲ ಎಂದರು.  ಇಲ್ಲಿನ ಶೇ.95ರಷ್ಟು ಮಂದಿ ಮಾತುಕತೆ ಮೂಲಕ ಶಾಂತಿಯುತ ಪರಿಹಾರಕ್ಕೆ ಒಲವು ತೋರಿದ್ದಾರೆ ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin