ಯುವತಿಯನ್ನು ಆಕೆಯ ಗೆಳೆಯನೇ ಗುಂಡಿಟ್ಟು ಕೊಂದ
ನವದೆಹಲಿ, ಡಿ.21-ರಾಷ್ಟ್ರ ರಾಜಧಾನಿ ಮರ್ಡರ್ ಮತ್ತು ರೇಪ್ ಕ್ಯಾಪಿಟಲ್ ಎಂಬ ಕುಖ್ಯಾತಿ ಪಡೆಯುತ್ತಿದೆ. 17 ವರ್ಷದ ಯುವತಿಯನ್ನು ಆಕೆಯ ಗೆಳೆಯ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ದೆಹಲಿಯ ನಜಾಫ್ಗಢ್ನಲ್ಲಿ ನಡೆದಿದೆ. ದೆಹಲಿಯ ವಾಯುವ್ಯ ಪ್ರದೇಶದಲ್ಲಿರುವ ರಜೌರಿ ಗಾರ್ಡನಲ್ಲಿ ನಿನ್ನೆ ಯುವತಿ ಮತ್ತು ಆಕೆಯ ಇಬ್ಬರು ಗೆಳೆಯರು ನಿನ್ನೆ ಮಧ್ಯಾಹ್ನ ಭೋಜನಕ್ಕೆ ತೆರಳಿದ್ದರು. ನಂತರ ಅವರು ದ್ವಾರಕಾ ಪ್ರದೇಶದಲ್ಲಿ ಶಾಪಿಂಗ್ಗೆ ಹೊರಟರು. ರಾತ್ರಿ 7.30ರಲ್ಲಿ ಯುವತಿಯ ತಾಯಿ ಮೊಬೈಲ್ ಫೋನ್ನಲ್ಲಿ ಕರೆ ಮಾಡಿದರು. ಇದೇ ವೇಳೆ ಮೂವರು ಕಾರಿನಲ್ಲಿ ಯುವತಿಯ ಮನೆ ಬಳಿ ಬಂದಾಗ ಒಬ್ಬ ಸ್ನೇಹಿತ ಯೋಗೇಶ್ ಕಾರಿನಿಂದ ಕೆಳಗಿಳಿದ. ಕಾರಿನಲ್ಲಿ ಆಕೆ ಮತ್ತು ಗೆಳೆಯ ಶುಭಂ ಇದ್ದರು.
ಆಗ ಗುಂಡಿನ ಶಬ್ಧ ಕೇಳಿ ತಾಯಿ ತಕ್ಷಣ ಮನೆಯಿಂದ ಬಂದು ನೋಡಿದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಶುಭಂ ಪರಾರಿಯಾದ. ಅಲ್ಲಿದ್ದ ಯೋಗೇಶ್ ನೆರವಿನಿಂದ ತಾಯಿ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟು ಹೊತ್ತಿಗಾಗಲೇ ಯುವತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕಾರಿನಲ್ಲಿ ರಿವಾಲ್ವಾರ್ ಪತ್ತೆಯಾಗಿದೆ. ಈ ಕೃತ್ಯದ ನಂತರ ಶುಭಂ ಮತ್ತು ಆತನ ಕುಟುಂಬದವರು ನಾಪತ್ತೆಯಾಗಿದ್ದಾರೆ. ಪೊಲೀಸರು ಹಂತಕನಿಗೆ ವ್ಯಾಪಕ ಬಲೆ ಬೀಸಿದ್ದಾರೆ.
Eesanje News 24/7 ನ್ಯೂಸ್ ಆ್ಯಪ್ – Click Here to Download