“ಗುಬ್ಬಿ ಹುಡುಗಿಯರನ್ನು ಕೆಣಕಿದರೆ ಇದೆ ಗತಿ”

ಈ ಸುದ್ದಿಯನ್ನು ಶೇರ್ ಮಾಡಿ

Gubbi-Boy

ಗುಬ್ಬಿ, ಜ.18- ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿ ಹಿಂಸಿಸಿರುವ ಘಟನೆ ಗುಬ್ಬಿಯಲ್ಲಿ ನಡೆದಿದೆ. ಯುವತಿಯೊಬ್ಬಳನ್ನು ದಲಿತ ಹುಡುಗ ಪ್ರೀತಿಸಿದ ಎಂಬ ಕಾರಣಕ್ಕೆ ತೋಟದ ಮನೆಯಲ್ಲಿ ಕೂಡಿ ಹಾಕಿ ಹೊಡೆದು ಬೆತ್ತಲೆ ಮಾಡಿ ಸ್ಲೇಟ್ ಮೇಲೆ ಗುಬ್ಬಿ ಹುಡುಗಿಯರನ್ನು ಕೆಣಕಿದರೆ ಇದೇ ಗತಿ ಎಂದು ಬರೆಸಿ ಆ ಹುಡುಗನ ಕೈಲಿ ಹಿಡಿಸಿ ಫೋಟೋ ತೆಗೆದು ಅವುಗಳನ್ನು ವಾಟ್ಸಪ್‍ಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ. 20 ವರ್ಷದ ಅಭಿಷೇಕ್ ಪಟ್ಟಣದ ಹುಡುಗಿ ಜತೆ ಸಂಪರ್ಕದಲ್ಲಿದ್ದ ಎಂಬ ಕಾರಣಕ್ಕೆ ಹುಡುಗಿ ಮನೆಯವರು ಈತನನ್ನು ಹುಡುಗಿಯಿಂದಲೇ ಫೋನ್ ಮಾಡಿಸಿ ಕರೆಸಿಕೊಂಡು ಈ ಅಮಾನುಷ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

Gubbi-Boy-01

ಯುವಕ ಅಭಿಷೇಕ್ ಕುಟುಂಬದವರು ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈತ ಗುಬ್ಬಿ ಕಾಲೋನಿ ನಿವಾಸಿ ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ದಲಿತ ಯುವಕ ನಮ್ಮ ಮಗಳನ್ನು ಪ್ರೀತಿಸುತ್ತಾನೆ ಎಂಬ ಕಾರಣಕ್ಕೆ ನಾಲ್ವರೂ ಸೇರಿಕೊಂಡು ತೋಟದ ಮನೆಯಲ್ಲಿ ಕೂಡಿ ಹಾಕಿ ಅಮಾನುಷವಾಗಿ ಥಳಿಸಿ ಆ ಕೃತ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್‍ಪಿ ಚಿದಾನಂದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin