ಯುವತಿ ಚುಡಾಯಿಸಿದ್ದನ್ನು ಪ್ರಶ್ನಿಸಿದ ಯುವಕರಿಗೆ ಚಾಕು ಇರಿತ
ಹಾಸನ, ಫೆ.10-ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಇಬ್ಬರಿಗೆ ಪುಂಡನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಳಗೊಳದ ನಿವಾಸಿ ದಿಲೀಪ್ ಮತ್ತು ಆನಂದ್ ಚಾಕು ಇರಿತಕ್ಕೊಳಗಾದ ಯುವಕರು.ಇಂದು ಬೆಳಗ್ಗೆ ಯುವತಿಯೊಬ್ಬಳು ಬೆಳಗೊಳದ ಎಟಿಎಂವೊಂದರಲ್ಲಿ ಹಣ ಡ್ರಾ ಮಾಡಲು ತೆರಳುವ ವೇಳೆ ಪುಂಡ ನವೀನ್ ಯುವತಿಯನ್ನು ಚುಡಾಯಿಸಿದ್ದಾನೆ. ಈ ವೇಳೆ ಅಲ್ಲೇ ಇದ್ದ ದಿಲೀಪ್ ಮತ್ತು ಆನಂದ್ ಪ್ರಶ್ನಿಸಿದ್ದಾರೆ.ಇದರಿಂದ ಕೋಪಗೊಂಡ ನವೀನ್ ತನ್ನ ಬಳಿಯಿದ್ದ ಚಾಕುವಿನಿಂದ ದಿಲೀಪ್ ಮತ್ತು ಆನಂದ್ಗೆ ಚಾಕುವಿನಿಂದ ಇರಿದಿದ್ದಾನೆ.ತಕ್ಷಣವೇ ಸ್ಥಳೀಯರು ಇರಿತಕ್ಕೊಳಗಾದವರನ್ನು ಶ್ರವಣಬೆಳಗೊಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನವೀನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS