ಯುವರಾಜ್ ಸಿಂಗ್ ಡ್ರಗ್ಸ್ ತೊಗೋತಾರಂತೆ…!

ಈ ಸುದ್ದಿಯನ್ನು ಶೇರ್ ಮಾಡಿ

Yuvaraj-Singh

ಮುಂಬೈ, ನ. 01 : ಆ ಆಟಗಾರನ ಹೆಸರ ಕೇಳಿದರೆ ಸಾಕು ಭಾರತದ ಕ್ರಿಕೆಟ್ ಅಭಿಮಾನಿಗಳ ಮೈಯಲ್ಲಿ ಅದೇನೋ ಪುಳಕ, ಆತ ಹೊಡೆದ ಆರು ಸಿಕ್ಸ್ ಗಳನ್ನೂ ಯಾವ ಭಾರತೀಯನೂ ಎಂದು ಮರೆಯುವುದಿಲ್ಲ. 28 ವರ್ಷಗಳ ನಂತರ ಭಾರತ ಮತ್ತೆ ವಿಶ್ವಕಪ್ ಗೆದ್ದಾಗ ಆತನೇ ಯುವರಾಜನಂತೆ ಹೋರಾಡಿ ಗೆಲುವಿನ ಸೂತ್ರದಾರನಾಗಿದ್ದ, ಕ್ಯಾನ್ಸರ್ ಎಂಬ ಮಹಾಮಾರಿಯನ್ನೇ ಗೆದ್ದು ಸಾವು ಗದ್ದು ಬಂದ ಮನೋಬಲವುಳ್ಳ ವ್ಯಕ್ತಿ ಆತ, ಅವನೇ ಭಾರತ ಕಂಡ ಬೇಸ್ಟ್ ಆಲ್ ರೌಂಡರ್ ಯುವರಾಜ್ ಸಿಂಗ್.  ಆದರೆ, ಈ ಯುವರಾಜ್ ಸಿಂಗ್ ಡ್ರಗ್ಸ್ ದಾಸರಾಗಿದ್ದಾರಂತೆ..! ಹೌದು ಹೀಗೆ ಯಾರೋ ಹೆಳಿದ್ದರೆ ಸುಳ್ಳು ಅಪವಾದ ಎನ್ನಬಹುದಾಗಿತ್ತು. ಆದರೆ ಹೀಗೆ ಹೇಳಿದ್ದು ಯುವರಾಜ್ ಸೀಂಗ್ ನ ತಮ್ಮನ ಹೆಂಡತಿ.

ಯುವರಾಜ್ ಸಿಂಗ್ ಗಾಂಜಾ ಸೇವನೆ ಮಾಡುತ್ತಿದ್ದ ಎಂದು ಯುವರಾಜ್ ಸಿಂಗ್ ಸಹೋದರ ಜೋರಾವರ್ ಸಿಂಗ್ ಮಾಜಿ ಪತ್ನಿ ಆಕಾಂಕ್ಷ ಶರ್ಮ ಹೊಸ ಬಾಂಬ್ ಸಿಡಿಸಿದ್ದಾರೆ. ಇತ್ತೀಚೇಗಷ್ಟೇ ಜೋರಾವರ್ ಸಿಂಗ್ ಜತೆ ವಿಚ್ಚೇದನ ಪಡೆದು ಆಕಾಂಕ್ಷ ಶರ್ಮ ದೂರವಾಗಿದ್ದರು. ಆನಂತರ ಹಿಂದಿ ರಿಯಾಲಿಟಿ ಷೋ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು, ಅಲ್ಲೂ ಸಹ ಯುವರಾಜ್ ಸಿಂಗ್ ಅವರ ತಾಯಿಯ ಮೇಲೆ ತೀವ್ರ ಆರೋಪಗಳನ್ನು ಮಾಡಿದ್ದರು. ಬಿಗ್ ಬಾಸ್ ನಿಂದ ಹೊರಬಂದಿರುವ ಆಕಾಂಕ್ಷ ‘ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನದಲ್ಲಿ ಮಾತನಾಡುವಾಗ ‘ಯುವರಾಜ್ ಸಿಂಗ್ ತಾನು ಗಾಂಜಾ ಸೇವಿಸುತ್ತಿದ್ದಾಗಿ ನನ್ನ ಬಳಿ ಹೇಳಿಕೊಂಡಿದ್ದ ಎಂದು ಆರೋಪಿಸಿದ್ದಾಳೆ.

ಇನ್ನೂ ಯುವರಾಜ್ ತಾಯಿ ಷಬ್ನಂ ಅವರು ನಿಮಗೆ ಯಾವ ರೀತಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು ‘ಅವರ ಮನೆಯಲ್ಲಿ ಮಹಿಳೆಯರಿಗೆ ಕಿರುಕುಳ ಎಂಬುದು ಸಾಮಾನ್ಯ ಸಂಗತಿ, ಕಿರುಕುಳದ ಭಗವಾಗಿ ನನ್ನ ಪತಿಯೊಂದಿಗೆ ಗಾಂಜಾ ಸೇವನೆ ಮಡಬೇಕಿತ್ತು’ ಎಂದು ಹೇಳಿದ್ದಾರೆ.
‘ಈ ವಿಷಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಷಬ್ನಂ ಸಿಂಗ್ ಅವರ ತಮ್ಮನ್ನು ಸಮರ್ಥಿಸಿಕೊಳ್ಳುವಂತ ಪ್ರಯತ್ನ ಮಾಡಿದ್ದಾರೆ’ ಎಂದು ಆಕಾಂಕ್ಷ ಹೇಳಿದ್ದಾರೆ.
ಅಷ್ಟೇ ಅಲ್ಲದೇ ಷಬ್ನಂ ಸಿಂಗ್ ಅವರು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅವರಿಂದಲೇ ನಮ್ಮ ದಂಪಾತ್ಯ ಕೇವಲ ನಾಲ್ಕೇ ತಿಂಗಳಲ್ಲಿ ಮುರಿದುಬಿತ್ತು. ಎಂದು ಈ ಹಂದೆ ಅಕಾಂಕ್ಷ ತಿಳಿಸಿದ್ದರು. ಈಗ ಈ ವಿಷಯ ದೇಶದೆಲ್ಲೆಡೆ ಚೆರ್ಚೆಗೆ ಗ್ರಾಸವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin