ಯುವ ಪ್ರತಿಭೆಗಳ`ಅಮಾವಾಸೆ’

ಈ ಸುದ್ದಿಯನ್ನು ಶೇರ್ ಮಾಡಿ

22

ಹೊಸಬರ ತಂಡದ ವಿನೂ ತನ ಪ್ರಯತ್ನವಾಗಿ ನಿರ್ಮಾಣ ವಾಗುತ್ತಿರುವ ಅಮಾವಾಸೆ ಚಿತ್ರ ಇದೀಗ ಪೂರ್ಣಗೊಂಡಿದೆ. ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೆ.ಪ್ರಶಾಂತ್ ಪ್ರಥಮ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಶೀರ್ಷಿಕೆಯಲ್ಲಿ ಚಿತ್ರದ ನಾಯಕರ ಹೆಸರಿನ ಮೊದಲಕ್ಷರವಿದೆ. ಸಾಮಾನ್ಯವಾಗಿ ಅಮಾವಾಸ್ಯೆ ಎಂದರೆ ಗ್ರಹಣ ಎಂದು ನಂಬು ತ್ತಾರೆ. ಮತ್ತೆ ಕೆಲವರು ಅದು ಒಳ್ಳೆಯ ದಿನ ಎಂದು ಕೂಡ ನಂಬಿದವರಿದ್ದಾರೆ. ಆದರೆ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡೇ ನಿರ್ದೇಶಕ ಪ್ರಶಾಂತ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಈ ಚಿತ್ರದ ಕಥೆ ನಾಲ್ವರು ಯುವಕರ ಸುತ್ತ ನಡೆಯುತ್ತದೆ. ಅಮರ್, ವಾಸು, ಮಹೇಶ್ ಮತ್ತು ಸೇಂದಿ ಎಂಬ ಹೆಸರಿನ ನಾಲ್ವರು ಹುಡುಗರ ನಡುವೆ ನಡೆಯುವ ಈ ಹಾರರ್ ಕಥೆಯಲ್ಲಿ ಪ್ರೀತಿ, ಸ್ನೇಹದ ಎಳೆಯಿದೆಯಂತೆ. ಈ ಚಿತ್ರಕ್ಕೆ ಡಾ.ಚಂದ್ರಶೇಖರ್ ಮತ್ತು ಜಗದೀಶ್ ಸೇರಿ ಬಂಡವಾಳ ಹಾಕಿ ದ್ದಾರೆ. ಈಗ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಮೊನ್ನೆ ಈ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನಡೆಯಿತು. ಸಾಹಿತಿ ದೊಡ್ಡ ರಂಗೇಗೌಡ ಹಾಗೂ ನಿರ್ಮಾಪಕ ಅಣಜಿ ನಾಗರಾಜ್ ಆಗಮಿಸಿ ಚಿತ್ರಕ್ಕೆ ಮತ್ತು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸಾಹಿತಿ ದೊಡ್ಡರಂಗೇಗೌಡ ಮಾತನಾಡುತ್ತ ಹೊಸಬರ ತಂಡ ಒಂದು ಒಳ್ಳೆಯ ಚಿತ್ರ ವನ್ನೇ ಮಾಡಿದೆ ಎನ್ನುವ ಭರವಸೆ ಇದೆ. ಚಿತ್ರ ಎಲ್ಲಾ ಕಡೆ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು. ಅಣಜಿ ನಾಗರಾಜ್ ಅವರ ನೇತೃತ್ವದ ಆಡಿಯೋ ಕಂಪನಿ ಈ ಧ್ವನಿ ಸುರುಳಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin