ಯೂಟ್ಯೂಬ್ ನೋಡಿ ಬಾಡಿಗೆರಿರುವ ಮನೆಗಳಲ್ಲಿ ದರೋಡೆಗೆತ್ನಿಸಿದ್ದ ಕಳ್ಳ ಜೋಡಿಯ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Youtube-Couple

ಚೆನೈ, ಮಾ.23- ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಒಳಕ್ಕೆ ಪ್ರವೇಶಿಸಿ ಮನೆಯೊಡತಿ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ ವಿದ್ಯಾವಂತ ಯುವಕರಿಬ್ಬರನ್ನು ಹೊಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಯುವಕರಲ್ಲಿ ಒಬ್ಬನು ಸ್ನಾತಕೋತ್ತರ ವಿದ್ಯಾರ್ಥಿ, ಮತ್ತೊಬ್ಬ ಇಂಜಿನಿಯರ್ ಆಗಿದ್ದು ಹಣದ ಕೊರತೆಯಿಂದಾಗಿ ಇಂತಹ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ.

ಹಿನ್ನೆಲೆ: ಹೊಸೂರು ಪಟ್ಟಣದ ನಿವಾಸಿ ಲಕ್ಷ್ಮೀ ಎಂಬುವವರ ಮನೆಯನ್ನು ಬಾಡಿಗೆಗೆ ಮಾತನಾಡಿ 2 ಸಾವಿರ ರೂ. ಮುಂಗಡ ನೀಡಿದ್ದಾರೆ. ನಂತರ ಏಕಾಏಕಿ ಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿ ಬಾಯಿಗೆ ಬಟ್ಟೆ ತೂರಿಸಿ ಕೊಲೆಗೆ ಯತ್ನಿಸಿದ್ದಾರೆ. ಆದರೆ ಈ ವೇಳೆ ಮನೆಯೊಡತಿ ಕಿರುಚಾಡಿದ್ದರಿಂದ ಅಕ್ಕಪಕ್ಕದ ಮನೆಯವರು ಧಾವಿಸಿದ್ದಾರೆ. ಆಗಯುವಕರಿಬ್ಬರು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಸಾರ್ವಜನಿಕರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈಗ ಯುವಕರಿಬ್ಬರೂ ಪೊಲೀಸರ ಅತಿಥಿಯಾಗಿದ್ದು ತಾವು ದರೋಡೆಗೆ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೊಸೂರು ಠಾಣೆ ಪೊಲೀಸ್ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin