ಯೆಮೆನ್‍ನಲ್ಲಿ ಅಂತ್ಯಸಂಸ್ಕಾರಕ್ಕೆ ಜಮಾಯಿಸಿದ್ದವರ ಮೇಲೆ ವಾಯು ದಾಳಿ : 155ಕ್ಕೂ ಹೆಚ್ಚು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

CuQcVr-XEAAsMuc ವಿಶ್ವಸಂಸ್ಥೆ, ಅ.9-ಯೆಮೆನ್‍ನಲ್ಲಿ ಅಂತ್ಯ ಸಂಸ್ಕಾರ ಸಂದರ್ಭದ ವೇಳೆ ಸೌದಿ ನೇತೃತ್ವದ ಮಿತ್ರಪಡೆಗಳು ನಿನ್ನೆ ನಡೆಸಿದ ದಾಳಿಗಳಲ್ಲಿ 155ಕ್ಕೂ ಹೆಚ್ಚು ಮಂದಿ ಹತರಾಗಿ, 525 ಜನ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಬಂಡುಕೋರರನ್ನು ಗುರಿಯಾಗಿಟ್ಟುಕೊಂಡು ಕೈಗೊಳ್ಳಲಾದ ಈ ದಾಳಿಯಲ್ಲಿ ಅನೇಕ ನಾಗರಿಕರು ಬಲಿಯಾಗಿದ್ದಾರೆ. . ರಾಜಧಾನಿ ಸನ್ನಾದ ಸಮುದಾಯ ಭವನದಲ್ಲಿ ಅಂತ್ಯಕ್ರಿಯೆಗಾಗಿ ಅನೇಕರು ಜಮಾಯಿಸಿದ್ದಾಗ ಈ ವಾಯು ದಾಳಿಗಳು ನಡೆಸಿದೆ. ಈ ದಾಳಿಗಳಿಂದ ರಕ್ಷಣಾ ಕಾರ್ಯಕರ್ತರು ದಿಗ್ಭ್ರಮೆಗೊಂಡು ಕುಪಿತರಾಗಿದ್ದಾರೆ ಎಂದು ಯೆಮೆನ್‍ನಲ್ಲಿ ವಿಶ್ವಸಂಸ್ಥೆಯ ಮಾನವೀಯ ನೆರವು ವಿಭಾಗದ ಸಂಚಾಲಕ ಜ್ಯಾಮೀ ಮ್ಯಾಕ್‍ಗೋಲ್ಡ್‍ರಿಕ್ ಹೇಳಿದ್ದಾರೆ.

CuQcVhvWcAANkW7

ಆರಂಭಿಕ ವರದಿಗಳ ಪ್ರಕಾರ 155ಕ್ಕೂ ಹೆಚ್ಚು ಮಂದಿ ಮೃತರಾಗಿದ್ದು, ಸುಮಾರು 525 ಜನ ಗಾಯಗೊಂಡಿದ್ದಾರೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಅನೇಕರು ತೀವ್ರ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ.  ಯೆಮೆನ್‍ನಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರಗಳು ತಕ್ಷಣ ನಿಲ್ಲಬೇಕು. ಈ ದಾಳಿಗಳ ಬಗ್ಗೆ ತಕ್ಷಣ ತನಿಖೆ ನಡೆಯಬೇಕು ಹಾಗೂ ಜನರನ್ನು ರಕ್ಷಿಸಲು ಅಂತಾರಾಷ್ಟ್ರೀಯ ಸಮುದಾಯ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.  ಸೌದಿ ನೇತೃತ್ವದ ಮಿತ್ರಪಡೆಗಳ ಹುಥಿ ಬಂಡುಕೋರರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಿದ್ದಾರೆ.

CuQcVXJWcAAyyq2

ಅರಬ್ ಜಗತ್ತಿನ ಬಡದೇಶಗಳಲ್ಲಿ ಒಂದಾದ ಯೆಮೆನಲ್ಲಿ ಮಾರ್ಚ್ 2015ರಿಂದ ಹುಥಿ ಬಂಡುಕೋರರ ವಿರುದ್ಧ ಮಿತ್ರಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ 6,700ಕ್ಕೂ ಹೆಚ್ಚು ಮಂದಿ ಹತರಾಗಿದ್ದು, ಇವರಲ್ಲಿ ಬಹುತೇಕ ನಾಗರಿಕರೇ ಆಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

► Follow us on –  Facebook / Twitter  / Google+

CuQcVhUWEAAerhE

Facebook Comments

Sri Raghav

Admin