ಯೆಮೆನ್‍ನಲ್ಲಿ ಯೋಧರು-ಬಂಡುಕೋರರ ನಡುವೆ ಭೀಕರ ಕಾಳಗ : 70ಕ್ಕೂ ಹೆಚ್ಚು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

70-Killed

ಅಡೆನ್, ಜ.23- ಯೆಮೆನ್‍ನ ಕರಾವಳಿ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಉಗ್ರರನ್ನು ಸದೆಬಡಿಯಲು ಸರ್ಕಾರಿ ಸೇನಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದ್ದು, ಘರ್ಷಣೆಯಲ್ಲಿ 70ಕ್ಕೂ ಹೆಚ್ಚು ಯೋಧರು, ಮತ್ತು ಬಂಡುಕೋರರು ಹತರಾಗಿ, ಅನೇಕರು ಗಾಯಗೊಂಡಿದ್ದಾರೆ. ಬಾಬ್ ಅಲ್-ಮನ್‍ದಬ್ ಜಲಸಂಧಿ ಬಳಿ ಸೌದಿ ನೇತೃತ್ವದ ಮಿತ್ರಪಡೆಗಳು ನಡೆಸಿದ ವಾಯುದಾಳಿ ಮತ್ತು ಕಾಳಗದಲ್ಲಿ 52ಕ್ಕೂ ಹೆಚ್ಚು ಶಿಯಾ ಹುತಿ ಬಂಡುಕೋರರು ಮತ್ತು ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲ್ಹೆಗೆ ನಿಷ್ಠರಾಗಿರುವ ಮಿತ್ರಪಡೆ ಯೋಧರು ಮೃತಪಟ್ಟಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹೋರಾಟದಲ್ಲಿ ಸರ್ಕಾರಿ ಪಡೆಗಳ 14 ಸದಸ್ಯರೂ ಸಹ ಹತರಾಗಿದ್ದಾರೆ.

ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಲಮಾರ್ಗವಾದ ಬಾಬ್ ಅಲ್-ಮನ್ ದಬ್ ಸಮೀಪದ ಧುಬಾದ್ ಜಿಲ್ಲೆಯನ್ನು ವಶಪಡಿಸಿಕೊಳ್ಳಲು ಜ.7ರಿಂದ ಅಧ್ಯಕ್ಷ ಅಬೆದ್ರಾಬ್ಬೋ ಮನ್ಸೂರ್ ಹದಿ ಪರ ಸೇನಾಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ.  ಮಿತ್ರಪಡೆಗಳ ಯುದ್ಧ ವಿಮಾನಗಳು ಮತ್ತು ಅಪಾಚೆ ಆಕ್ರಮಣಕಾರಿ ಹೆಲೆಕಾಪ್ಟರ್‍ಗಳು, ಮೋಖಾ ಕರಾವಳಿ ಪ್ರದೇಶದತ್ತ ಮುನ್ನುಗ್ಗುತ್ತಿರುವ ಹದಿ ಪರ ಯೋಧರಿಗೆ ಬೆಂಬಲ ನೀಡಲು ಬಂಡುಕೋರರ ಮೇಲೆ ದಾಳಿ ನಡೆಸಿದವು. ಇದೇ ವೇಳೆ ಉಗ್ರರು ಅಡಗಿಸಿಟ್ಟಿದ್ದ ನೆಲಬಾಂಬ್‍ಗಳು ಸ್ಫೋಟಗೊಂಡು ಸಾವು-ನೋವಿಗೆ ಕಾರಣವಾದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin