‘ಯೊಗಿ ಆದಿತ್ಯ ‌ನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ’ : ಗುಂಡೂರಾವ್ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath

ಬೆಂಗಳೂರು. ಏ. 14 : ಚುನಾವಣೆ  ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದ್ದು, ಇಂದು ಕೆಪಿಸಿಸಿ ‌ಕಾರ್ಯಾಧ್ಯಾಕ್ಷ ದಿನೇಶ್ ಗುಂಡೂರಾವ್ ‘ಯೊಗಿ ಆದಿತ್ಯ ‌ನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ’ ಎಂದು ನಾಲಿಗೆ ಹರಿಬಿಟ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.  “ಅವನು ಯೋಗಿ ಆದಿತ್ಯ ‌ನಾಥ್ ಅಲ್ಲ ಢೋಂಗಿ ಆದಿತ್ಯ ‌ನಾಥ್, ಮುಖ್ಯಮಂತ್ರಿ ಸ್ಥಾನದಲ್ಲಿ ಇರೋದಕ್ಕೆ ಅವನು‌ ನಾಲಾಯಕ್, ಕೂಡಲೇ ಪ್ರಧಾನಿ ನರೇಂದ್ರ ‌ಮೋದಿ ಅವನನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು. ಅವನೇನಾದರೂ ಕರ್ನಾಟಕಕ್ಕೆ ಬಂದ್ರೆ ನಾಡಿಗೆ ಅಪಮಾನ ವಾಗುತ್ತೆ. ಅವನು ಏನಾದ್ರು ‌ಮತ್ತೆ ಕರ್ನಾಟಕಕ್ಕೆ ಬಂದ್ರೆ ಚಪ್ಪಲಿಯಲ್ಲಿ ಹೊಡೆಯಿರಿ. ಎಂದು ಏಕವಚನದಲ್ಲೇ ಯೋಗಿ ಆದಿತ್ಯ ‌ನಾಥ್ ವಿರುದ್ದ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಗುಂಡೂರಾವ್ ಇಂದು ಈ ಹೇಳಿಕೆ ನೀಡಿದ್ದು ಇದೊಂದು ದೊಡ್ಡ ವಿವಾದವಾಗುವ ಲಕ್ಷಣಗಳು ಕಂಡುಬರುತ್ತಿವೆ.

Facebook Comments

Sri Raghav

Admin