ಯೋಗಾಭ್ಯಾಸಕ್ಕೆ ಚಕ್ಕರ್, ಅಮ್ಮನ ಜೊತೆ ಉಪಾಹಾರಕ್ಕೆ ಮೋದಿ ಹಾಜರ್.. !

ಈ ಸುದ್ದಿಯನ್ನು ಶೇರ್ ಮಾಡಿ

Amma-Modi

ಗಾಂಧಿನಗರ, ಜ.10-ದೇಶಕ್ಕೆ ಪ್ರಧಾನಿಯಾದರೂ ತಾಯಿಗೆ ಮಗ. ತಮ್ಮ ಮಾತೆಯನ್ನು ಭೇಟಿ ಮಾಡಿ ಮಾತೃ ವಾತ್ಸಲ್ಯದ ಸವಿ ಅನುಭವಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ದೈನಂದಿನ ಯೋಗಾಭ್ಯಾಸಕ್ಕೆ ಚಕ್ಕರ್ ಹಾಕಿದ್ದಾರೆ.   ಗುಜರಾತ್‍ನಲ್ಲಿ ಇಂದಿನಿಂದ ಆರಂಭವಾಗಿರುವ ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಭಾಗವಹಿಸಲು ಗಾಂಧಿ ನಗರಕ್ಕೆ ಆಗಮಿಸಿದ ಮೋದಿ ಇಂದು ಬೆಳಿಗ್ಗೆ ರೈಸಾನ್ ಗ್ರಾಮದಲ್ಲಿರುವ ತಮ್ಮ ತಾಯಿ ಹೀರಾಬಾ ಅವರನ್ನು ಭೇಟಿ ಮಾಡಿ ಒಟ್ಟಿಗೆ ಉಪಾಹಾರ ಸೇವಿಸಿ ಕೆಲಕಾಲ ಮಾತೆಯ ಸನಿಹದಲ್ಲಿದ್ದರು.  ಇದಕ್ಕಾಗಿ ಅವರು ಇಂದಿನ ಪ್ರಾತ:ಕಾಲದ ಯೋಗ ಸೆಷನ್‍ನಲ್ಲಿ ಪಾಲ್ಗೊಳ್ಳಲಿಲ್ಲ. ನಾನು ಇಂದಿನ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವುದಿಲ್ಲ. ಬೆಳಿಗ್ಗೆಯೇ ತಾಯಿಯವರನ್ನು ಭೇಟಿ ಮಾಡಿ ಅವರೊಂದಿಗೆ ಉಪಾಹಾರ ಸೇವಿಸುತ್ತೇನೆ ಎಂದು ಅವರು ಟ್ವೀಟ್‍ನಲ್ಲಿ ತಿಳಿಸಿದ್ದರು.

97 ವರ್ಷದ ಹೀರಾಬಾ ಮೋದಿಯವರ ಹಿರಿಯ ಸಹೋಧರ ಪಂಕಜ್ ಮೋದಿ ಅವರೊಂದಿಗೆ ರಾಜಧಾನಿ ಗಾಂಧಿನಗರದ ಸಮೀಪವಿರುವ ರೈಸಾನ ಹಳ್ಳಿಯಲ್ಲಿ ವಾಸವಾಗಿದ್ದಾರೆ.

, , ,

Facebook Comments

Sri Raghav

Admin