ಯೋಗಾಭ್ಯಾಸ ಅಣ್ಣಾಹಜಾರೆ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Yoga--01

ಬೆಂಗಳೂರು, ಜೂ.21-ಗ್ರಾಮೀಣಾಭಿವೃದ್ಧಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಟದ ಅಗತ್ಯವಿದೆ. ತಮಗೆ 80 ವರ್ಷವಾಗಿದ್ದರೂ ಹೋರಾಡುವ ಶಕ್ತಿ ಕುಂದಿಲ್ಲ. ಇದಕ್ಕೆ ಕಾರಣ ತಾವು ರೂಢಿಸಿಕೊಂಡು ಬಂದಿರುವ ಯೋಗಾಭ್ಯಾಸ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇಂದಿಲ್ಲಿ ತಿಳಿಸಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಪ್ರದರ್ಶನದ ನಂತರ ಮಾತನಾಡಿದ ಅವರು, ಬಲಿಷ್ಠ ಭಾರತಕ್ಕೆ ಯೋಗ ಅತ್ಯಗತ್ಯ. ಯೋಗ ಮಾಡುವವರಿಗೆ ಮನಸ್ಸು ಶುದ್ಧವಾಗಿರುತ್ತದೆ. ಉತ್ತಮ ಆಚಾರ-ವಿಚಾರಗಳಿಂದ ಚಾರಿತ್ರ್ಯವು ಶುದ್ಧವಾಗಿರುತ್ತದೆ. ಇದಕ್ಕೆ ಯೋಗವೂ ಪೂರಕ ಎಂದು ಅಭಿಪ್ರಾಯಪಟ್ಟರು.

ನಮ್ಮ ಉದ್ದೇಶ ಒಂದೇ. ಉತ್ತಮ ಸಮಾಜ ನಿರ್ಮಾಣ ಮಾಡುವುದು. ಅದಕ್ಕಾಗಿ ಯುವಶಕ್ತಿಯನ್ನು ಸದೃಢಗೊಳಿಸಬೇಕಿದೆ. ಯುವಶಕ್ತಿ ಸದೃಢಗೊಳ್ಳಲು ಯೋಗದಂತಹ ಆಚರಣೆಗಳು ರೂಢಿಯಲ್ಲಿರಬೇಕು. ನನಗೆ 80 ವರ್ಷವಾಗಿದ್ದರೂ 27 ವರ್ಷದ ಯುವಕನಂತೆ ಕೆಲಸ ಮಾಡುತ್ತೇನೆ. ಎಲ್ಲ ಕೆಲಸದಲ್ಲೂ ಹುಮ್ಮಸ್ಸಿದೆ. ಆದರೆ, ಇಂದಿನ ಅದೆಷ್ಟೊ ಯುವಕರು 80 ವರ್ಷದ ಮುದುಕರಂತೆ ಆಡುತ್ತಾರೆ. ಇನ್ನೇನು ಮಾಡೋದಿದೆ ಎಂಬಂತೆ ವರ್ತಿಸುತ್ತಾರೆ. ಕೆಲವು ಸಿನಿಕತನದಿಂದ ವರ್ತಿಸುವವರು ವಯಸ್ಸಾದ ಈತನೇನು ಮಾಡುತ್ತಾರೆ ಎಂದು ನನ್ನ ಬಗ್ಗೆ ವ್ಯಂಗ್ಯವಾಡುತ್ತಾರೆ. ಆದರೆ, ನನ್ನಲ್ಲಿ ಹೋರಾಡುವ ಹುಮ್ಮಸ್ಸು ಹೆಚ್ಚಿದೆ ಎಂದು ಹೇಳಿದರು.

ಹಣ, ಆಸ್ತಿ ಯಾವುದೂ ನನ್ನಲ್ಲಿಲ್ಲ. ದೇವಸ್ಥಾನದಲ್ಲಿ ಮಲಗುತ್ತೇನೆ. ತಿನ್ನಲು ತಟ್ಟೆ, ಮಲಗಲು ಚಾಪೆ ಇದೆ. ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬೆಳಗ್ಗೆ 4 ಗಂಟೆಗೆ ಎದ್ದು ವಾಯುವಿಹಾರಕ್ಕೆ ಹೊರಡುತ್ತೇನೆ. ನಂತರ ಪ್ರಾಣಾಯಾಮ, ಯೋಗ ಮಾಡಿ ಮನಸ್ಸನ್ನು ನಿಷ್ಕಲ್ಮಶವಾಗಿಟ್ಟುಕೊಂಡಿದ್ದೇನೆ. ಯಾವುದೇ ರಾಜಕೀಯ ಪಕ್ಷಗಳು ಯೋಗವನ್ನು ಕಲಿಸಲು ಮುಂದಾಗಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin