ಯೋಧರ ವಿರುದ್ಧ ಐಎಸ್ ಉಗ್ರರರಿಂದ ಕಚ್ಚಾ ರಾಸಾಯನಿಕ ಅಸ್ತ್ರ ಪ್ರಯೋಗ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

Chemical-Wepons

ವಾಷಿಂಗ್ಟನ್, ಅ.19- ಇರಾಕ್ ಮೊಸುಲ್ ನಗರದ ಮರು ವಶಕ್ಕಾಗಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ಹಿಮ್ಮೆಟ್ಟಿಸಲು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಮಾರಕ ಕಚ್ಚಾ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ. ಇಂಥ ರಾಸಾಯನಿಕ ಅಸ್ತ್ರಗಳನ್ನು ಅಭಿವೃದ್ಧಿಗೊಳಿಸುವ ತಾಂತ್ರಿಕ ಸಾಮಥ್ರ್ಯವು ಐಎಸ್ ಉಗ್ರರಿಗೆ ಸೀಮಿತವಾಗಿದ್ದರೂ, ಇರಾಕ್ ಸೇನೆ ಮೇಲೆ ಅದು ಇಂಥ ಕೆಮಿಕಲ್ ವೆಪನ್‍ಗಳನ್ನು ಬಳಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಸ್ ಉಗ್ರಗಾಮಿಗಳು ತಮ್ಮ ಶಸ್ತ್ರಾಸ್ತ್ರಗಳಲ್ಲಿ ರಾಸಾಯನಿಕಗಳನ್ನು ಬಳಸುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಅಮೆರಿಕ ಪಡೆಗಳು ಕೆಲವು ತಿಂಗಳಿನಿಂದ ಶೆಲ್ ಫ್ರಾಂಗ್ಮೆಂಟ್‍ಗಳನ್ನು (ಅಸ್ತ್ರಗಳ ಕವಚದ ಭಾಗಗಳು) ಸಂಗ್ರಹಿಸಿವೆ. ಬಂಡುಕೋರರು ಸಲ್ಫರ್ ಮಸ್ಟರ್ಡ್ (ಪ್ರಬಲ ಗಂಧಕ ಇರುವ) ಏಜೆಂಟ್ ಎಂಬ ಅತ್ಯಂತ ಅಪಾಯಕಾರಿ ಕಚ್ಚಾ ರಾಸಾಯನಿಕ ಅಸ್ತ್ರಗಳನ್ನು ಉಪಯೋಗಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin