ರಂಗಭೂಮಿ ಕಲಾವಿದ ಚಿಕ್ಕ ಸುರೇಶ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

Suresh--01

ಬೆಂಗಳೂರು,ಫೆ.11-ನಟ ಹಾಗೂ ರಂಗಭೂಮಿ ಕಲಾವಿದ ಚಿಕ್ಕಸುರೇಶ್ ಇನ್ನಿಲ್ಲ. ರಂಗಭೂಮಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ರಂಗ ಸಂಘಟಕನಾಗಿ ಹಾಗೂ ಸಾಕ್ಷಚಿತ್ರಗಳ ನಿರ್ದೇಶಕನಾಗಿ ಕಳೆದ ಮೂರುವರೆ ದಶಕಕ್ಕೂ ಹೆಚ್ಚು ಕಾಲ ತಮ್ಮನ್ನು ತೊಡಗಿಸಿಕೊಂಡು ಸದಾ ಒಂದಿಲ್ಲೊಂದು ಕೆಲಸದಲ್ಲಿ ನಿರತನಾಗಿರುತ್ತಿದ್ದ ಸುರೇಶ ನಿನ್ನೆ ರಾತ್ರಿ ನಿಧನರಾಗಿದ್ದಾರೆ.   ತೆರೆದ ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಸುರೇಶ ಆರೋಗ್ಯದ ಕುರಿತು ಇನ್ನಷ್ಟು ಕಾಳಜಿ ವಹಿಸಿದ್ದರೆ ಇನ್ನೂ ಹಲವು ವರ್ಷ ಇರಬಹುದಾಗಿತ್ತು. ನಿರಂತರ ಕೆಲಸಗಳಿಂದ ಒಂಚೂರು ಬಿಡುವು ಪಡೆಯಲು ಕುಟುಂಬ ಪರಿವಾರ ಸಮೇತ ಗೋವಾಗೆ ಟ್ರಿಪ್ ಹೋಗಿದ್ದೇ ಜೀವಕ್ಕೆ ಕುತ್ತಾಯಿತು.

ವಾರಗಳ ಕಾಲ ಗೋವಾದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿದ ಸುರೇಶ ಗೋವಾದಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ನಿನ್ನೆ ರಾತ್ರಿ ನಿಧನರಾಗಿದ್ದಾರೆ.  ನೂರಾರು ಸಾಹಿತಿಗಳು, ಕಲಾವಿದರು ಹಾಗೂ ರಂಗಕರ್ಮಿಗಳ ಕುರಿತು ಚಿಕ್ಕಸುರೇಶ ಮಾಡಿದ ಸಾಕ್ಷಚಿತ್ರಗಳಂತೂ ಶತಮಾನಗಳಾಚೆಯೂ ಉಳಿಯುವಂತಹವು ಎಂದು ಅವರ ಅಭಿಮಾನಿಗಳು ಪ್ರಶಂಸಿಸಿದ್ದಾರೆ.

ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಇಂದು 12 ಗಂಟೆಯ ನಂತರ ಅಭಿನಯ ತರಂಗದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಅಗಲಿದ ರಂಗಸಂಗಾತಿ ಚಿಕ್ಕಸುರೇಶಗೆ ಕಲಾವಿದರು, ಚಲನಚಿತ್ರ ನಟರು, ಹಿರಿ-ಕಿರಿತೆರೆ ಕಲಾವಿದರು, ರಂಗಕರ್ಮಿಗಳು ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ.

Facebook Comments

Sri Raghav

Admin