‘ರಂಗೂನ್’ನ ಜುಲಿಯಾ ಪಾತ್ರ ಕಂಗನಾಗೆ ಹೇಳಿಮಾಡಿಸದಂತಿದೆ 

ಈ ಸುದ್ದಿಯನ್ನು ಶೇರ್ ಮಾಡಿ

Rangoon
ಬಾಲಿವುಡ್‍ನ ಬಹು ಬೇಡಿಕೆಯ ನಟಿ ಕಂಗನಾ ರನಾವತ್ ಎಂದಾಕ್ಷಣ ನೆನಪಿಗೆ ಬರುವುದು ಆಕೆಯ ನೇರ ನಡೆ ಮತ್ತು ಖಡಕ್ ನುಡಿ. ಈಕೆಗೆ ಸರಿ ಹೊಂದುವ ಪಾತ್ರ ರಂಗೂನ್ ಸಿನಿಮಾದಲ್ಲಿ ಲಭಿಸಿದೆ. ಇದರಲ್ಲಿ ಈಕೆಯದು ನಿರ್ಭೀತ ಯುವತಿ ಜುಲಿಯಾ ಪಾತ್ರ. ವಿವಿಧ ಸ್ಥಳಗಳಲ್ಲಿ ಪ್ರವಾಸ ಕೈಗೊಂಡು ಬ್ರಿಟಿಷ್ ಇಂಡಿಯನ್ ಆರ್ಮಿಯ ಯೋಧರನ್ನು ರಂಜಿಸುವ ಪಾತ್ರ ಈಕೆಯದು. 1940ರಲ್ಲಿ ಬ್ರಿಟಿಷರ ವಿರುದ್ಧ ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನಡೆಯುವ ಘಟನೆಗಳನ್ನು ಈ ಚಿತ್ರ ಆಧರಿಸಿದೆ. ವಿಶಾಲ್ ಭರದ್ವಾಜ್ ನಿರ್ದೇಶನದ ಈ ಸಿನಿಮಾ ಮಹಿಳೆಯ ಸ್ವಾಭಿಮಾನ ಮತ್ತು ನೈತಿಕ ಸ್ಥೈರ್ಯ ಪ್ರತಿರೂಪವಾಗಿದೆ ಎನ್ನುತ್ತಾಳೆ ಕಂಗನಾ.

ರಂಗೂನ್ ಜುಲಿಯಾ ಎಂಬ ಯುವತಿಯ ಸುತ್ತ ಗಿರಕಿ ಹೊಡೆಯುವ ಕತೆ. ಆದ್ದರಿಂದ ಈ ಸಿನಿಮಾ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದು ಪ್ರತಿಯೊಬ್ಬ ಮಹಿಳೆಯೂ ನೋಡಲೇಬೇಕಾದ ಸಿನಿಮಾ ಎನ್ನುತ್ತಾಳೆ ಕಂಗನಾ. ಇದಕ್ಕಾಗಿ ಈಕೆ ಹಳೆಯ ವಿಂಟೇಜ್ ಕಾರನ್ನು ಸಿನಿಮಾ ಪ್ರಚಾರಕ್ಕಾಗಿಯೂ ಬಳಿಸಿದ್ದಾಳೆ. ಅಲ್ಲದೇ ಕಾಶ್ಮೀರ ಕಣಿವೆ ಸೇನಾ ಶಿಬಿರವೊಂದರಲ್ಲಿ ಯೋಧರನ್ನೂ ಭೇಟಿ ಮಾಡಿದ್ದಾಳೆ.ಸೈಫ್ ಅಲಿ ಖಾನ್ ಮತ್ತು ಶಾಹೀದ್ ಕಪೂರ್ ನಟಿಸಿರುವ ರಂಗೂನ್ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ ಫೆಬ್ರವರಿ 24ರಂದು ತೆರೆಕಾಣಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin