ರಂಜಾನ್ ಪ್ರಾರ್ಥನೆ ವೇಳೆ ಬೋಕೋ ಹರಾಂ ಉಗ್ರರಿಂದ ಬಾಂಬ್ ಸ್ಫೋಟ, 11 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Boko-HARRAM

ಕ್ಯಾಮೆರೂನ್ (ನೈಜೀರಿಯಾ), ಜೂ.3-ಆಫ್ರಿಕಾ ದೇಶಗಳಲ್ಲಿ ಬೋಕೋ ಹರಾಂ ಉಗ್ರರ ಹಿಂಸಾಕೃತ್ಯಗಳು ಮುಂದುವರೆದಿವೆ. ನೈಜೀರಿಯಾ ಕ್ಯಾಮರೂನ್‍ನಲ್ಲಿ ರಂಜಾನ್ ಪ್ರಾರ್ಥನೆ ಸಂದರ್ಭದಲ್ಲಿ ಅವಳಿ ಸ್ಫೋಟಗಳಿಂದ ಇಬ್ಬರು ಬಾಂಬರ್‍ಗಳೂ ಸೇರಿದಂತೆ 11 ಮಂದಿ ಹತರಾಗಿ, 30ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ.   ನೈಜೀರಿಯಾ ಗಡಿ ಭಾಗದ ಬೌರ್ವೆರ್‍ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಉಗ್ರರು ಹಾಗೂ 9 ಮಂದಿ ಮೃತಪಟ್ಟಿದ್ದಾರೆ ಎಂದು ಗೌರ್ನರ್ ಮಿದ್ ಜಿಯವಾಕ ಬುಕಾರಿ ತಿಳಿಸಿದ್ದಾರೆ.ಮುಸ್ಲಿಮರು ಮುಂಜಾನೆ 5.30ರಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದಾಗ ಅವಳಿ ಬಾಂಬ್‍ಗಳು ಸ್ಫೋಟಗೊಂಡು ಸಾವು-ನೋವು ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 30ಕ್ಕೂ ಹೆಚ್ಚು ಜನರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin