ರಕ್ಕಸ ನಾಯಿಗಳ ದಾಳಿಗೆ ನಾಲ್ಕು ಕುರಿಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

sheep

ಸೂಲಿಬೆಲೆ, ಏ.20- ಮನೆ ಮುಂದೆ ಕಟ್ಟಿ ಹಾಕಿದ ಕುರಿಗಳ ಗುಂಪಿನ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ನಾಲ್ಕು ಕುರಿಗಳನ್ನು ಕಚ್ಚಿ ಸಾಯಿಸಿರುವ ಘಟನೆ ಸೂಲಿಬೆಲೆ ಪಟ್ಟಣದಲ್ಲಿ ರಾತ್ರಿ ನಡೆದಿದೆ.ನಾಯಿ ದಾಳಿಗೆ ಬೆಲೆ ಬಾಳುವ ನಾಲ್ಕು ಕುರಿಗಳು ಜೀವ ಕಳೆದುಕೊಂಡಿದ್ದು, ಇನ್ನೂ ಎರಡು ಕುರಿಗಳಿಗೆ ಗಾಯಗಳಾಗಿವೆ. ಘಟನೆ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸೂಲಿಬೆಲೆ ಹಳೇ ಪೋಸ್ಟ್ ಆಪೀಸ್ ಬೀದಿಯಲ್ಲಿರುವ ಸೀನಪ್ಪ ಎಂಬಾತ ಕುರಿಗಳನ್ನು ಸಾಕಿದ್ದು, ಮನೆಯ ಮುಂಭಾಗದ ಶೆಡ್‍ನಲ್ಲಿ ಕುರಿಗಳನ್ನು ಕಟ್ಟಲಾಗಿತ್ತು.ಕುರಿಗಳು ಇದ್ದ ಶೆಡ್‍ನ ಸುತ್ತಲು ಪಾಸ್ಟಿಕ್ ಪೇಪರ್ ಅನ್ನು ರಕ್ಷಣೆ ಕವಚವಾಗಿ ಕಟ್ಟಲಾಗಿತ್ತು. ಎಲ್ಲರೂ ಮಲಗಿದ ವೇಳೆ ದಾಳಿ ಮಾಡಿರುವ ಬೀದಿ ನಾಯಿಗಳ ಗುಂಪು ಬೆಲೆ ಬಾಳುವ ನಾಲ್ಕು ಕುರಿಗಳನ್ನು ಕಚ್ಚಿ ಸಾಯಿಸಿವೆ.ಕೆಲವೊಮ್ಮೆ ಜನರನ್ನು ಕಚ್ಚಿ ಗಾಯಗೊಳಿಸುತ್ತಿವೆ.ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಬೀದಿ ನಾಯಿಗಳನ್ನು ಹಿಡಿದು ಸಾಗಿಸುವ ಕಾರ್ಯ ಮಾಡಿತ್ತು.ಆದರೇ ಕೆರೆ ಅಂಗಳದಲ್ಲಿರುವ ಸುಮಾರು 50 ಬೀದಿ ನಾಯಿಗಳ ಗುಂಪು ಒಮ್ಮಲೇ ಗ್ರಾಮಕ್ಕೆ ನುಗ್ಗಿ ಜನರು ಮತ್ತು ಚಿಕ್ಕ ಚಿಕ್ಕ ಪ್ರಾಣಿಗಳನ್ನು ಕಚ್ಚಿ ತಿನ್ನುತ್ತಿವೆ. ಭಾರೀ ಗಾತ್ರದ ಈ ನಾಯಿಗಳನ್ನು ಕಂಡು ಜನರು ಓಡುವಂತಾಗಿದೆ. ಕೂಡಲೇ ಬೀದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin