ರಕ್ತದಲ್ಲಿ ಮನವಿ ಪತ್ರ ಬರೆದು ಕರವೇ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ನಂಜನಗೂಡು, ಸೆ.7- ಕಾವೇರಿ ನೀರಿನ ಹಂಚಿಕೆಯಲ್ಲಿ ರಾಜ್ಯದದ ರಾಜಕೀಯ ಮುಖಂಡರಿಗೆ ಸಾಮಾನ್ಯ ಜ್ಞಾನವಿಲ್ಲದಂತಾಗಿದೆ.ಅವರನ್ನು ಎಚ್ಚರಿಸಲು ರಕ್ತದಿಂದ ಪತ್ರ ಬರೆದು ಮನವರಿಕೆ ಮಾಡಲಾಗುವುದು ಎಂದು ತಾಲ್ಲೂಕು ಕರವೇ ಅಧ್ಯಕ್ಷ ರವಿಕುಮಾರಗೌಡ ತಿಳಿಸಿದ್ದಾರೆ.  ಈಗಾಗಲೇ ನಮ್ಮ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲ. ಇದರ ನಡುವೆ ಕುಡಿಯಲು ಕೂಡ ಸಂಕಷ್ಟದ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ. ಇದನ್ನು ಮನಗಾಣದೆ ನೆರೆಯ ತಮಿಳುನಾಡು ಸರ್ಕಾರ ನಮ್ಮ ಮೇಲೆ ದ್ವೇಷ ಸಾಧಿಸಿ ನೀರನ್ನು ಕಸಿಯುತ್ತಿದೆ. ನ್ಯಾಯಾಲಯದಲ್ಲೂ ನಮಗೆ ಹಿನ್ನಡೆಯಾಗಿದೆ. ಈ ಅನ್ಯಾಯವನ್ನು ಸರಿಪಡಿಸಲು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ನಡುವೆ ಹಸಿರುಸೇನೆ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.ಬಂಗಾರ ನಾಯ್ಕ ,ಶಿರಮಳ್ಳಿ ಸಿದ್ದಪ್ಪ, ಜಿಲ್ಲಾ ಉಪಾದ್ಯಕ್ಷ ಬೊಕ್ಕಳ್ಳಿ ನಂಜುಂಡಸ್ವಾಮಿ, ಕರವೇಶಿವರಾಮೇಗೌಡ ಬಣದ ತಾಲ್ಲೋಕು ಅದ್ಯಕ್ಷ ರವಿ ಕುಮಾರ್ ಗೌಡ, ನಾಯಕ ಸಂಘರ್ಷ ಸಮಿತಿಯ ಚಂದ್ರು ,ಸೈಯಿದ್ ವಾಸೀಂ, ಮಾದೇಶ್, ಪ್ರಜ್ಞಾವಂತ  ನಾಗರೀಕ ಪಡೆಯ ಸತೀಶ್, ವಿಕ್ರಾಂತ್ ವಾಸು, ಸತೀಶ್, ನಗರಸಭಾ ಸದಸ್ಯ ರಾಜೇಶ್, ವಾಟರ್ ಸಿದ್ದಪ್ಪ, ಗ್ರಾ,ಪಂ ,ಮಾಜಿ ಅದ್ಯಕ್ಷ ಲೋಕೇಶ್, ನಾಸೀರ್ ಮುಂತಾದವರು ಭಾಗವಹಿಸಿದ್ದರು.

 

Follow us on –  Facebook / Twitter  / Google+

Facebook Comments

Sri Raghav

Admin