ರಕ್ತದಲ್ಲಿ ಸಿಎಂಗೆ ಪತ್ರ ಬರೆದ ಅತ್ಯಾಚಾರ ಸಂತ್ರಸ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Blood

ಕರ್ನಲ್, ಆ.25- ಕರ್ನಲ್ ನಿವಾಸಿಯಾದ ಅತ್ಯಾಚಾರ ಸಂತ್ರಸ್ತೆಯೊಬ್ಬಳು ನ್ಯಾಯ ಕೋರಿ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಅವರಿಗೆ ರಕ್ತದಿಂದ ಪತ್ರ ಬರೆದಿದ್ದಾ ಳೆ.
ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ. ಪೀಡಿತೆ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾ ಳೆ.  ವರದಿಗಳ ಪ್ರಕಾರ ಯುವತಿಗೆ ರವಿ ಎಂಬಾತನ ಜತೆಗೆ 2009ರಲ್ಲಿ ನಿಶ್ಚಿತಾರ್ಥವಾಗಿತ್ತು. ಆದರೆ, ಕೆಲವು ಕಾರಣಗಳಿಂದ ಮದುವೆ ಮುರಿದು ಬಿದ್ದಿತ್ತು. ಆದರೆ, ಆತ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರಿಂದ ಯುವತಿ ಕಂಗಾಲಾದಳು. ತಕ್ಷಣ ರವಿ ಮತ್ತು ಆತನ ಸಹೋದರನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಆದರೆ, ಇಲ್ಲಿಯವರೆಗೆ ಯಾರ ಬಂಧನವೂ ಆಗಿಲ್ಲ.
ನ್ಯಾಯ ಸಿಗದೆ ಬೇಸತ್ತಿದ್ದ ಯುವತಿ ಈಗ ಸಿಎಂ ಕಟ್ಟರ್ ಅವರಿಗೆ ಪತ್ರ ಬರೆದು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾ ಳೆ.ಆರೋಪಿಗಳ ಕುಟುಂಬ ದೂರನ್ನು ಹಿಂಪಡೆಯುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದಾ ರೆ. ಜತೆಗೆ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾ ರೆ. ನನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆಗೆ ಶರಣಾಗುವುದಾಗಿ ಆಕೆ ಬೆದರಿಕೆ ಒಡ್ಡಿದ್ದಾಳೆ.  ಯುವತಿಯ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin