ರಕ್ಷಣಾ ಇಲಾಖೆಗೆ 1 ಲಕ್ಷ ಕೋಟಿ ರೂ. ಉಳಿಸಿದ ಮೋದಿಯ ‘ಮೇಕ್ ಇನ್ ಇಂಡಿಯಾ’

ಈ ಸುದ್ದಿಯನ್ನು ಶೇರ್ ಮಾಡಿ

Make-In-India--025

ನವದೆಹಲಿ, ಡಿ.3-ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ(ಭಾರತದಲ್ಲೇ ತಯಾರಿಸಿ) ಅಭಿಯಾನವು ಹಲವು ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಿದ್ದು, ಈ ಉಪಕ್ರಮದಿಂದಾಗಿ ರಕ್ಷಣಾ ಸಚಿವಾಲಯಕ್ಕೆ 1 ಲಕ್ಷ ಕೋಟಿ ರೂ.ಗಳನ್ನು ಉಳಿತಾಯ ಮಾಡಲು ಸಹಕಾರಿಯಾಗಿದೆ. ವಿದೇಶಿ ವಿನಿಮಯಕ್ಕೆ ಹೋಗುತ್ತಿದ್ದ ಈ ದೊಡ್ಡ ಮೊತ್ತ ಉಳಿಕೆಯಾಗಿರುವುದರಿಂದ ಅದನ್ನು ಸ್ವದೇಶಿ ನಿರ್ಮಿತ ಮಹತ್ವದ ಯೋಜನೆಗಳಿಗೆ ಬಳಸಲು ಅನುವು ಮಾಡಿಕೊಟ್ಟಿದೆ.

ಕಳೆದ ಎರಡು ವರ್ಷಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಒ) ಮೂಲಕ ಆರು ವಾಯು ರಕ್ಷಣಾ ಮತ್ತು ಯುದ್ಧ ಟ್ಯಾಂಕ್ ಧ್ವಂಸಕ ಕ್ಷಿಪಣಿ ಯೋಜನೆಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಇದೇ ಇನ್ನೂ ಹತ್ತು ಹಲವು ಹೊಸ ಯೋಜನೆಗಳೂ ಇದರ ಪರಿಶೀಲನೆಯಲ್ಲಿದ್ದು, ಅನಗತ್ಯವಾಗಿ ವಿದೇಶಗಳ ತಂತ್ರಜ್ಞಾನಗಳನ್ನು ಅವಲಂಬಿಸದೇ ಸ್ವಾವಲಂಬನೆಯತ್ತ ಸಾಗುವಲ್ಲಿ ಇದು ಮಹತ್ವದ ಕೊಡುಗೆ ನೀಡಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮದಿಂದಾಗಿ ದೇಶೀಯ ರಕ್ಷಣಾ ಉದ್ಯಮದ ಅಭಿವೃದ್ದಿಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಬರದಿದ್ದರೆ, ಹಣವು ವಿದೇಶಿ ಕಂಪನಿಗಳ ಪಾಲಾಗುತ್ತಿತ್ತು. ಆದರೆ ಈಗ ಆ ಮೊತ್ತವನ್ನು ದೇಶೀಯ ಉತ್ಪಾದನೆಗೆ ಸಮರ್ಪಕವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಮತ್ತು ಅರುಣ್ ಜೇಟ್ಲಿ ಹಾಗೂ ಪ್ರಸ್ತುತ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಕ್ಷಿಪಣಿ ವ್ಯವಸ್ಥೆಯನ್ನು ದೇಶೀಯವಾಗಿ ನಿರ್ಮಿಸಬೇಕೆಂಬ ಬಗ್ಗೆ ಒಲವು ತೋರಿದ್ದಾರೆ. ಇದಕ್ಕೆ ಡಿಆರ್‍ಡಿಒ ಸಹ ಸಹಮತ ವ್ಯಕ್ತಪಡಿಸಿ ಸ್ವದೇಶಿ ನಿರ್ಮಿತ ರಕ್ಷಣಾ ಶಸ್ತ್ರಾಸ್ತ್ರಗಳು ಕಾರ್ಯರೂಪಕ್ಕೆ ಬರಲು ನೆರವಾಗುತ್ತಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಫಲವಾಗಿ ಭೂಸೇನೆ ಮತ್ತು ನೌಕಾಪಡೆಗೆ ಭೂಮಿಯಿಂದ ಗಗನಕ್ಕೆ ಚಿಮ್ಮುವ ಅಲ್ಪಾಗಾಮಿ ಕ್ಷಿಪಣಿಗಳು(ಎಸ್‍ಆರ್-ಎಸ್‍ಎಎಂಗಳು), ಭೂಸೇನೆಗಾಗಿ ಭೂಮಿಯಿಂದ ಗಗನಕ್ಕೆ ಚಿಮ್ಮುವ ಕ್ಷಿಪ್ರ ಪ್ರತಿಕ್ರಿಯೆ ಕ್ಷಿಪಣಿ(ಕ್ಯೂಅರ್-ಎಸ್‍ಎಎಂ), ಅರ್ಮಿಗಾಗಿ ಯುದ್ಧ ಟ್ಯಾಂಕ್ ಧ್ವಂಸಕ ಮಾರ್ಗದರ್ಶಿ ಕ್ಷಿಪಣಿ (ಎಟಿಜಿಎಂ), ಮತ್ತು ಹೆಲಿಕಾಪ್ಟರ್‍ನಿಂದ ಪ್ರಯೋಗಿಸುವ ಸಮರ ಟ್ಯಾಂಕ್ ನಾಶಕ ಮಾರ್ಗದರ್ಶಿ ಕ್ಷಿಪಣಿಗಳು ಹಾಗೂ ಭೂ ಸೇನಾಪಡೆಗಾಗಿ ಶಸ್ತ್ರಸಜ್ಜಿತ ವಾಹನದಿಂದ ಉಡಾಯಿಸಬಹುದಾದ ಟ್ಯಾಂಕ್ ಧ್ವಂಸಕ ಕ್ಷಿಪಣಿ-ಇತ್ಯಾದಿ ಸೇರಿದಂತೆ ಅನೇಕ ಅತ್ಯಾಧುನಿಕ ಶಸ್ತ್ರಾಸ್ತಗಳನ್ನು ದೇಶೀಯವಾಗಿ ಅಭಿವೃದ್ದಿಗೊಳಿಸಲಾಗಿದೆ.

Facebook Comments

Sri Raghav

Admin