ರಕ್ಷಾಬಂಧನ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu--5

ನಂಜನಗೂಡು, ಆ.19- ದೇಶಾದ್ಯಂತ ನಡೆಯುತ್ತಿರುವ ಮಧುರವಾದ ಭಾವಾನುಬಂದ ಅಣ್ಣ, ತಂಗಿಯರ ನವಿರಾದ ಭಾವನೆಗಳನ್ನು ರಕ್ಷಾಬಂಧನದ ಮೂಲಕ ಗಟ್ಟಿಗೊಳಿಸುವ ದಿನವನ್ನು ನಂಜನಗೂಡು ನಗರದಲ್ಲೂ ಕೂಡ ಬಿಜೆಪಿ ಪಕ್ಷದ ವತಿಯಿಂದ ಯಶಸ್ವಿಯಾಗಿ ಆಚರಿಸಲಾಯಿತು.ಬಿಜೆಪಿಯ ನಂಜನಗೂಡು ನಗರ ಮತ್ತು ಮೈಸೂರು ಜಿಲ್ಲಾ ಸ್ಲಂ ಮೋರ್ಚಾ, ಮಹಿಳಾ ಮೋರ್ಚಾ ಅಲ್ಪಸಂಖ್ಯಾತರ ಮೋರ್ಚಾ ಹಾಗೂ ಯುವ ಮೋರ್ಚಾ ವತಿಯಿಂದ ರಕ್ಷಾ-ಬಂಧನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೊದಲಿಗೆ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಕಾರ್ಯಕರ್ತರು ಬಿಜೆಪಿಯ ಎಲ್ಲಾ ಘಟಕಗಳು ಠಾಣಾಧಿಕಾರಿ ಚೇತನ್‍ರವರಿಗೆ ರಾಕಿ ಕಟ್ಟಿ ನಂತರ ಅಲ್ಲಿನ ಸಿಬ್ಬಂದಿ ವರ್ಗದವರವರೆಲ್ಲರಿಗೂ ರಾಕಿ ಕಟ್ಟಿದರು.ನಂತರ ಸರಸ್ವತಿ ಕಾಲೋನಿಯ ಸ್ಲಂ ನಿವಾಸಿಗಳೀಗೆ ರಕ್ಷಾ ಬಂಧನವನ್ನು ಕಟ್ಟಿ ಅಲ್ಲಿನ ನಿವಾಸಿಗಳಿಗೆ ನಾವು ನಿಮ್ಮೊಂದಿಗೆ ಸದಾ ಕಾಲ ಇದೇ ರೀತಿ ಇರುತ್ತೇವೆ ಎಂಬ ಅಭಯ ನೀಡಿದರು.ಮೈಸೂರು ಜಿಲ್ಲಾ ಉಪಾಧ್ಯಕ್ಷ ಕೆ.ಜಯದೇವ್, ಜಿ.ಪಂ.ಸದಸ್ಯ ಹೆಜ್ಜಿಗೆ ಹೆಚ್.ಎಸ್.ದಯಾನಂದಮೂರ್ತಿ, ಮಂಗಳಾಸೋಮಶೇಖರ್, ಸ್ಲಂ ಮೋರ್ಚಾದ ಅಧ್ಯಕ್ಷ ಶಿವನಂಜೇಗೌಡ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಇಲಿಯಾಜ್ ಅಹಮದ್, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ನಗರದ ಅಧ್ಯಕ್ಷ ಎನ್.ವಿ.ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಸಿ.ಬಸವಣ್ಣ, ಮಹಿಳಾ ಮೋರ್ಚಾ ತಾಲ್ಲೂಕಾಧ್ಯಕ್ಷರಾದ ಉಮಾದೇವಿ, ನಗರಾಧ್ಯಕ್ಷೆ ಗಾಯಿತ್ರಿ ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin