ರಜತ ಮಹೋತ್ಸವದ ಸಂಭ್ರಮದಲ್ಲಿ ಗೌರಿ-ಶಾರುಖ್

ಈ ಸುದ್ದಿಯನ್ನು ಶೇರ್ ಮಾಡಿ

Sharukha

ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್‍ಗೆ ಈಗ ರಜತ ಮಹೋತ್ಸವದ ಸಡಗರ-ಸಂಭ್ರಮ. ಎಸ್‍ಆರ್‍ಕೆ-ಗೌರಿ ಚಿಬ್ಬೆರ್ ವಿವಾಹವಾಗಿ 25 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ.  ಶಾರುಖ್-ಗೌರಿ 1984ರಿಂದಲೂ ಪರಸ್ಪರ ಪರಿಚಿತರು. ಆದರೆ ಅವರಿಬ್ಬರು ವಿವಾಹಬಂಧನಕ್ಕೆ ಒಳಗಾಗಿದ್ದು ಏಳು ವರ್ಷಗಳ ಬಳಿಕ. 1991ರಲ್ಲಿ ಇವರು ವಿವಾಹವಾದಾಗ ಶಾರುಖ್ ಬಾಲಿವುಡ್ ನಟ ಆಗಿರಲಿಲ್ಲ, ಆದರೆ ಮಹತ್ವಾಕಾಂಕ್ಷೆಯುಳ್ಳ ಪ್ರತಿಭಾವಂತ ಟಿವಿ ತಾರೆಯಾಗಿ ಸೂಪರ್‍ಸ್ಟಾರ್ ಆಗುವ ಕನಸು ಕಾಣುತ್ತಿದ್ದ.

ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎಂಬ ಮಾತು ಬಾಲಿವುಡ್ ಮೆಗಾಸ್ಟಾರ್‍ಗೆ ಅನ್ವಯಿಸುತ್ತದೆ. ಬಿಹೈಂಡ್ ಎವರಿ ಸಕ್ಸಸ್‍ಫುಲ್ ಮ್ಯಾನ್ ದೇರ್ ಇಸ್ ವುಮೆನ್. ಬಿಹೈಂಡ್ ಶಾರುಖ್ ಖಾನ್ ಗ್ಲೋರಿ, ದೇರ್ ಇಸ್ ಗೌರಿ ಎಂಬ ಮಾತು ಬಾಲಿವುಡ್‍ನಲ್ಲಿ ಪ್ರಚಲಿತದಲ್ಲಿದೆ.25 ವರ್ಷಗಳ ಈ ಸುದೀರ್ಘ ಪಯಣದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿರುವ ಶಾರುಖ್‍ಗೆ ಪ್ರತಿ ಹಂತದಲ್ಲಿ ಸಹಕಾರ ನೀಡಿದ ಗೌರಿ ಆತನ ಯಶಸ್ವಿಯ ಸಾಕಾರರೂಪಿಣಿ. ದಾಂಪತ್ಯ ಬದುಕಿನಲ್ಲಿ ವಿವಾದದ ಕಪ್ಪು ಚುಕ್ಕೆ ಇಲ್ಲದಂತೆ ವೈಯಕ್ತಿಕ ಜೀವನವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.

ಪ್ರತಿಭೆ, ಪರಿಶ್ರಮದಿಂದ ಹಂತ-ಹಂತವಾಗಿ ಮೇಲೇರಬಹುದು ಎಂಬುದಕ್ಕೆ ಎಸ್‍ಆರ್‍ಕೆಗಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ಬಾಜಿಗರ್ ಆಗಿ ಬಾಲಿವುಡ್ ಸವಾಲುಗಳನ್ನು ಮೆಟ್ಟಿ ನಿಂತು ಖಾನ್ ಬೆಳೆದ ಪರಿ ಬೆರುಗು ಮೂಡಿಸುವಂಥದ್ಧು. ಖಾನ್-ಗೌರಿ ದಾಂಪತ್ಯಕ್ಕೆ ಮೂರು ಮುದ್ದಾದ ಮಕ್ಕಳಿದ್ದಾರೆ.ಪತ್ನಿ,ಮಗ ಆರ್ಯನ್, ಮಗಳು ಸುಹಾನ ಮತ್ತು ಮತ್ತೊಬ್ಬ ಮಗ ಅಬ್‍ರಾಮ್ (ಬಾಡಿಗೆ ತಾಯ್ತನದಿಂದ ಜನನ) ಜೊತೆ ಮುಂಬೈನ ಬಾಂದ್ರಾದ ವೈಭವೋಪೇತ ಬಂಗಲೆಯಲ್ಲಿರುವ ಶಾರುಖ್, ಅತ್ಯಧಿಕ ಸಂಭಾವನೆ ಪಡೆಯುವ ವಿಶ್ವದ 10 ಅಗ್ರಮಾನ್ಯ ನಟರಲ್ಲಿ ಸ್ಥಾನ ಪಡೆದಿದ್ದಾನೆ.

 

► Follow us on –  Facebook / Twitter  / Google+

Facebook Comments

Sri Raghav

Admin