ನಟ ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ

ಈ ಸುದ್ದಿಯನ್ನು ಶೇರ್ ಮಾಡಿ

Dhanush-01

ಮದುರೈ, ನ.26-ಸೂಪರ್‍ಸ್ಟಾರ್ ರಜನಿಕಾಂತ್ ಅಳಿಯ ಹಾಗೂ ಜನಪ್ರಿಯತೆಯ ಉತ್ತುಂಗದಲ್ಲಿರುವ ನಟ ಧನುಷ್‍ಗೆ ಹೊಸ ವಿವಾದವೊಂದು ಕೊರಳಿಗೆ ಸುತ್ತಿಕೊಂಡಿದೆ. ಧನುಷ್ ನಮ್ಮ ಮಗ ಎಂದು ಮದುರೈನ ವೃದ್ಧ ದಂಪತಿ ಕೆಳ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಅಲ್ಲದೇ ತಮಗೆ ನಿರ್ವಹಣಾ ವೆಚ್ಚವನ್ನು ನೀಡಲು ಆತ ನಿರಾಕರಿಸಿದ್ದಾನೆ ಎಂದೂ ದೂರಿದ್ದಾರೆ.
ಮೇಲೂರು ತಾಲ್ಲೂಕಿನ ಮಲಮಪಟ್ಟಿಯ ಕದಿರೇಸನ್ (60) ಮತ್ತು ಅವರ ಪತ್ನಿ ಮೀನಾಕ್ಷಿ (55) ಅವರು ಧನುಷ್ ನಮ್ಮ ಮಗ ಎಂದು ವಾದಿಸಿದ್ದಾರೆ. ನಮ್ಮ ಮೂವರು ಮಕ್ಕಳಲ್ಲಿ ಆತನೂ ಒಬ್ಬ. ಮದುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಜನಿಸಿದ. ಆತನ ನಿಜವಾದ ಹೆಸರು ಕಲೈಸೆಲ್ವನ್ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಧನುಷ್ ಹತ್ತನೇ ತರಗತಿವರೆಗೆ ಮೇಲೂರಿನ ಆರ್.ಸಿ ಹೈಯರ್ ಸೆಕೆಂಡರಿ ಸ್ಕೂಲ್ ಮತ್ತು ಸರ್ಕಾರಿ ಬಾಲಕರ ಪ್ರೌಢ ಶಿಕ್ಷಣ ಶಾಲೆಯಲ್ಲಿ ಓದಿದ. ನಂತರ ಆತನನ್ನು ಶಿವಗಂಗಾ ಜಿಲ್ಲೆಯ ತಿರುಪ್ಪತ್ತೂರು ಖಾಸಗಿ ಶಾಲೆಯಲ್ಲಿ ಹನ್ನೊಂದನೇ ತರಗತಿಗೆ ಸೇರಿಸಲಾಯಿತು. ಆದಾಗ್ಯೂ ಆತ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಚಿತ್ರರಂಗದಲ್ಲಿ ಕೆಲಸ ಮಾಡಲು ಆರಂಭಿಸಿದ. ಆತ ನಿರ್ದೇಶಕ ಕಸ್ತೂರಿ ರಾಜಾ ಅವರ ಬಳಿ ಆರಂಭದಲ್ಲಿ ಕೆಲಸ ಮಾಡುತ್ತಿದ್ದ. ನಟನಾಗಿ ಜನಪ್ರಿಯನಾದ ನಮ್ಮ ಧನುಷ್‍ನನ್ನು ಭೇಟಿ ಮಾಡಲು ನಾನು ಹಲವಾರು ಬಾರಿ ಪ್ರಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ ಎಂದು ದಂಪತಿಗಳು ಮನವಿಯಲ್ಲಿ ದೂರಿದ್ದಾರೆ.

ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಟಿಎನ್‍ಎಸ್‍ಟಿಸಿ) ಕಂಡಕ್ಟರ್ ಆಗಿ ಇತ್ತೀಚೆಗಷ್ಟೇ ಕದಿರೇಸನ್ ನಿವೃತ್ತರಾಗಿದ್ದಾರೆ. ನಮಗೆ ಇನ್ನಿಬ್ಬರು ಮಕ್ಕಳಿದ್ದರೂ ಅವರು ಉತ್ತಮ ಉದ್ಯೋಗದಲ್ಲಿಲ್ಲ. ಅನಾರೋಗ್ಯ ಪೀಡಿತವಾಗಿರುವ ತಮ್ಮ ವೈದ್ಯಕೀಯ ಚಿಕಿತ್ಸೆ ಭರಿಸಲು ಮತ್ತು ಕುಟುಂಬ ನಿರ್ವಹಣೆ ಮಾಡಲು ತುಂಬಾ ತೊಂದರೆಯಾಗಿದೆ. ನಮ್ಮ ಮಗ ಧನುಷ್ ಪ್ರಸಿದ್ಧ ನಟನಾಗಿ ಉತ್ತಮ ಸ್ಥಿತಿಯಲ್ಲಿರುವುದರಿಂದ ನಮಗೆ ಪ್ರತಿ ತಿಂಗಳು 65,000 ರೂ.ಗಳ ನಿರ್ವಹಣಾ ವೆಚ್ಚವನ್ನು ನೀಡಲು ಆತನಿಗೆ ಸೂಚನೆ ನೀಡಬೇಕೆಂದು ಕೋರ್ಟ್‍ಗೆ ದಂಪತಿ ಮನವಿ ಮಾಡಿದ್ದಾರೆ.   ಈ ಮನವಿ ಹಿನ್ನೆಲೆಯಲ್ಲಿ ಮೇಲೂರು ನ್ಯಾಯಾಂಗ ದಂಡಾಧಿಕಾರಿ ಸೆಲ್ವಕುಮಾರ್ ಅವರು ಧನುಷ್‍ಗೆ ನೋಟಿಸ್ ಜÁರಿಗೊಳಿಸಿ ಜನವರಿ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin