ರಜನಿಕಾಂತ್ ‘KAALA’ ಚಿತ್ರದ ಫಸ್ಟ್ ಲುಕ್

ಈ ಸುದ್ದಿಯನ್ನು ಶೇರ್ ಮಾಡಿ

Kaala--041

ಚೆನ್ನೈ, ಮೇ 25-ಸೂಪರ್‍ಸ್ಟಾರ್ ರಜನಿಕಾಂತ್ ಸಿನಿಮಾಗಳೆಂದರೆ ಟೈಟಲ್‍ನಿಂದ ತೆರೆಕಾಣುವವರೆಗೂ ಸುದ್ದಿಯಲ್ಲಿರುತ್ತದೆ. ರಜನಿ ಅಭಿನಯದ ಮುಂದಿನ ಚಿತ್ರ ಯಾವುದು? ಅದರ ಹೆಸರೇನು? ಇತ್ಯಾದಿ ಕುತೂಹಲ ಕೆರಳಿರುವಾಗಲೇ ಸಿನಿಮಾ ಟೈಟಲ್ ಪ್ರಕಟಿಸಲಾಗಿದೆ. ಅಳಿಯ ಮತ್ತು ನಟ ಧನುಷ್ ನಿರ್ಮಿಸುತ್ತಿರುವ ರಜನಿ ಹೊಸ ಚಿತ್ರ ಹೆಸರು ಕಾಳ ಕರಿಕಾಳನ್.   ಧನುಷ್ ಚಿತ್ರದ ನಿರ್ಮಾಣ ಸಂಸ್ಥೆ ವಂಡರ್‍ಬಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದೆ. ಇದು ರಜನಿಕಾಂತ್ ಅವರ 2016ರ ಕಬಾಲಿ ಚಿತ್ರದ ಮುಂದಿನ ಭಾಗ ಎಂದು ಹೇಳಲಾಗುತ್ತಿದೆ.
ಕಬಾಲಿ ಸಿನಿಮಾ ನಿರ್ದೇಶಕ ಪ. ರಂಜಿತ್ ತಲೈವಾ ಮುಂದಿನ ಚಿತ್ರಕ್ಕೂ ಆಕ್ಷನ್-ಕಟ್ ಹೇಳಲಿದ್ದಾರೆ. ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಕಬಾಲಿ ಸಿನಿಮಾ ಈ ಹಿಂದೆ ಭಾರೀ ಪ್ರಚಾರದೊಂದಿಗೆ ವಿವಾದಕ್ಕೂ ಎಡೆಮಾಡಿಕೊಟ್ಟಿತ್ತು. ಮುಂಬೈ ಭೂಗತಲೋಕದ ಹಾಜಿ ಮಸ್ತಾನ್ ಜೀವನಕ್ಕೆ ಸಂಬಂಧಿಸಿದ್ದು ಎಂದು ತಕರಾರು ಎದ್ದಿತ್ತು. ತಮ್ಮ ತಂದೆಯ ಜೀವನವನ್ನು ಇದು ಆಧರಿಸಿದೆ ಎಂದು ಮಸ್ತಾನ್ ಪುತ್ರ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಚಿತ್ರ ತಂಡ ತಳ್ಳಿ ಹಾಕಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin