ರಜನಿ ರಾಜಕೀಯ ಎಂಟ್ರಿ ಸ್ವಾಗರಿಸಿದ ಕಮಲಹಾಸನ್, ಪ್ರಕಾಶ್ ರೈ ಸೇರಿದಂತೆ ಚಿತ್ರರಂಗದ ಗಣ್ಯರು

ಈ ಸುದ್ದಿಯನ್ನು ಶೇರ್ ಮಾಡಿ

Rajnikanth-01

ಬೆಂಗಳೂರು, ಡಿ.31-ನಟ ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿರುವುದನ್ನು ಖ್ಯಾತ ನಟರಾದ ಕಮಲಹಾಸನ್, ಪ್ರಕಾಶ್ ರೈ ಸೇರಿದಂತೆ ಚಿತ್ರರಂಗದ ಗಣ್ಯರು ಸ್ವಾಗತಿಸಿದ್ದಾರೆ. ತಮಿಳುನಾಡಿನಲ್ಲಿ ರಜನಿಕಾಂತ್ ಅವರು ಯಾವುದೇ ರಾಜಕೀಯ ಪಕ್ಷದ ಜೊತೆ ಸೇರಿಕೊಳ್ಳದೆ ಹೊಸ ಪಕ್ಷ ಕಟ್ಟಿರುವುದನ್ನು ಅಭಿನಂದಿಸುವುದಾಗಿ ಪ್ರಕಾಶ್ ರೈ ಈ ಸಂಜೆಗೆ ತಿಳಿಸಿದ್ದಾರೆ.

ಜಾತ್ಯತೀತ ಮನೋಭಾವದಿಂದ ಹೊಸ ಪಕ್ಷವನ್ನು ಕಟ್ಟುತ್ತಿರುವುದು ಒಳ್ಳೆಯ ವಿಚಾರವಾಗಿದ್ದು , ತಮ್ಮದೇ ಹೊಸ ಪಕ್ಷ ಘೋಷಣೆ ಮಾಡಿರುವುದು ಖುಷಿ ತಂದಿದೆ ಎಂದರು. ತಮಿಳುನಾಡಿನ ಜನಪ್ರಿಯ ನಟನಾಗಿರುವ ರಜನಿಕಾಂತ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ರೀತಿ ರಾಜಕೀಯದಲ್ಲೂ ಜನಪ್ರಿಯತೆ ಗಳಿಸಲಿ ಎಂದು ರೈ ಹಾರೈಸಿದರು.

ರಜನಿ ರಾಜಕೀಯ ಪ್ರವೇಶವನ್ನು ಟ್ವಿಟರ್ ಮೂಲಕ ಅಭಿನಂದಿಸಿರುವ ಕಮಲ್‍ಹಾಸನ್ ಅವರು, ರಜನಿ ಭವಿಷ್ಯ ಉಜ್ವಲವಾಗಲಿ ಎಂದು ಹರಸಿದ್ದಾರೆ. ಅದೇ ರೀತಿ ತಮಿಳುನಾಡು ಮತ್ತು ಕನ್ನಡ ಚಿತ್ರರಂಗದ ಹಲವಾರು ಗಣ್ಯರು ರಜನಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Facebook Comments

Sri Raghav

Admin